ಶಾಲಾ ಕಾಲೇಜು ಅಂಗಳದಲ್ಲಿ  ದತ್ತಿ ಉಪನ್ಯಾಸ

ಸಂಜೆವಾಣಿ ವಾರ್ತೆ

ದಾವಣಗೆರೆ.ಡಿ.13; ತಾಲೂಕು ಕನ್ನಡ ಸಾಹಿತ್ಯ ಪರಿಷತ್. ಶ್ರೀಮತಿ ದೇವಮ್ಮ ಬಸಪ್ಪ ಪ್ರೌಢಶಾಲೆ ಆರ್ ಎಂ ಸಿ ಲಿಂಕ್ ರಸ್ತೆ ದಾವಣಗೆರೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ  ಸಂಯುಕ್ತ ಆಶ್ರಯದಲ್ಲಿ ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಶ್ರೀಮತಿ ದೇವಮ್ಮ ಬಸಪ್ಪ ಪ್ರೌಢಶಾಲೆ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ  ಪುಟ್ಟರಂಗಪ್ಪ ವಹಿಸಿದ್ದರು. ತಾಲೂಕು ಕಸಾಪ ನಿರ್ದೇಶಕಿ ಶ್ರೀಮತಿ ಸೌಭಾಗ್ಯಮ್ಮ  ಪ್ರಾಸ್ತವಿಕವಾಗಿವಾಗಿ ಮಾತನಾಡುತ್ತಾ ಕನ್ನಡ ಸಾಹಿತ್ಯ ಪರಿಷತ್ ನಡೆದುಬಂದು ದಾರಿ ಹಾಗೂ ದತ್ತಿದಾನನಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಸುಮತಿ ಜಯಪ್ಪ ದತ್ತಿ ಉಪನ್ಯಾಸ ನೀಡುತ್ತಾ ನಂಬಿಕೆ-  ಮೂಢನಂಬಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಕಸಾಪ ನಿರ್ದೇಶಕ  ಷಡಕ್ಷರಪ್ಪ. ಎಂ.ಬೇತೂರು ಉಪಸ್ಥಿತರಿದ್ದರು