ಶಾಲಾ ಕಟ್ಟಡ : ಶಾಸಕರಿಂದ ಭೂಮಿಪೂಜೆ

ಮಾನ್ವಿ.ಸೆ.16-2019-20 ನೇ ಸಾಲಿನ ನಬಾರ್ಡ್ ಯೋಜನೆ ಅಡಿಯಲ್ಲಿ ಸುಮಾರು 55 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ‌ ಶಾಸಕ ರಾಜಾ ವೆಂಕಟಪ್ಪ ನಾಯಕ ಶಂಕುಸ್ಥಾಪನೆ ನೆರವೇರಿಸಿದರು.
ಮಾನವಿ ವಿಧಾನ ಸಭಾ ಕ್ಷೇತ್ರದ ಗೋವಿಂದಡ್ಡಿ ಗ್ರಾಮದಲ್ಲಿ ಇಂದು ನಬಾರ್ಡ್ ಯೋಜನೆಯಲ್ಲಿ ಸುಮಾರು 55 ಲಕ್ಷ ಮೊತ್ತದ ಶಾಲಾ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನನ್ನ ಈ ಎರಡು ವರ್ಷ ಅವಧಿಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಸುಮಾರು 100 ಕೋಟಿ ರೂಪಾಯಿ ಅನುದಾನವನ್ನು ನೀಡಿದ್ದೇನೆ. ಗ್ರಾಮೀಣ ಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಒಂದು ಕಟ್ಟಡ ಕಾಮಗಾರಿ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.
ಈಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಯುವ ಮುಂಖಡರಾದ ಶ್ರೀ ರಾಜಾ ರಾಮಚಂದ್ರ ನಾಯಕ,ತಾಲ್ಲೂಕು ಅದ್ಯಕ್ಷ ಮಲ್ಲಿಕಾರ್ಜುನ ಪಾಟೇಲ ಬಲ್ಲಟಿಗಿ,ನಗರ ಘಟಕ ಅದ್ಯಕ್ಷ ಖಲೀಲ ಖುರೀಷ,ಶ್ರೀದರ ಸ್ವಾಮಿ,ಗೋಪಾಲ ನಾಯಕ ಹರವಿ,ಎಮ್ ಡಿ ಇಸ್ಮಾಯಿಲ್, ಭಾಷ ಸಾಬ್,ಯಲ್ಲನ ಗೌಡ,ತಿಮ್ಮನಗೌಡ,ದಾನಪ್ಪ ದೊರೆ,ನಾಗರಾಜ ಸಾಹೂಕಾರ, ಹನುಮಂತ್ರಾಯ ನಾಯಕ, ಚಿದಾನಂದ ಸ್ವಾಮಿ,ವೆಂಕಟೇಶ ನಾಯಕ,ಜೆಟ್ಟಪ್ಪ ನಾಯಕ,ಹನುಮಪ್ಪ ಸಾಹೂಕಾರ,ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರ ಗ್ರಾಮಸ್ಥರು ಉಪಸ್ಥಿತಿರಿದ್ದರು.