ಶಾಲಾ ಕಟ್ಟಡಕ್ಕೆ ಆಡಳಿತ ಮಂಡಳಿ ಮನವಿ

ಮಾನ್ವಿ,ಜೂ.೦೯-
ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೂ ಶಾಲೆಯಿದ್ದರೂ ಕೂಡ ಅದು ಈಗಾಗಲೇ ಪಾಳುಬಿದ್ದು ದುರಸ್ತಿ ಹಂತದಲ್ಲಿದೆ. ಕ್ಷೇತ್ರದ ಶಾಸಕರು ಕೂಡಲೇ ನೂತನ ಕಟ್ಟಡಗಳನ್ನು ಮಂಜೂರು ಮಾಡಿಸಿ ಕೊಡಬೇಕೆಂದು ನಕ್ಕುಂದಿ ಗ್ರಾಮದ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಶರಣಪ್ಪ ಅಗಸಿಮುಂದಿನ ಅವರು ಸೇರಿದಂತೆ ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಸೇರಿ ನೂತನ ಶಾಸಕರಿಗೆ ಸನ್ಮಾನಿಸಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವಿರುಪಾಕ್ಷಪ್ಪ ಗೌಡ ಮಾಲಿ ಪಾಟೀಲ್, ಅಂಬಯ ನಾಡಗೌಡ್ರು, ಶರಣಪ್ಪ ಅಗಸಿ ಮುದಿನ್, ಅಂಬರೀಶ್ ಜಡೆ, ನಾಗರಾಜ್ ಸಿರವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.