ಶಾಲಾ ಕಟ್ಟಡಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ: ಗ್ರಾಮಸ್ಥರ ನಡುವೆ ಅಸಮಾಧಾನ

ಹೊಸಪೇಟೆ, ನ.9: ತಾಲೂಕಿನ ಬೈಲುವದ್ದಿಗೇರಿಯಲ್ಲಿ ಸರ್ಕಾರಿ ಪ್ರೌಡಶಾಲೆ ನಿರ್ಮಾಣಕ್ಕಾಗಿ ಭೂಮಿಗೆ ಆಗ್ರಹಿಸಿ ಗ್ರಾಮಸ್ಥರು ಇಂದು ತಾಲೂಕು ಕಚೇರಿ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
2019ರಿಂದ ಸರ್ಕಾರಿ ಪ್ರೌಡಶಾಲೆಯನ್ನು ಉನ್ನತಿಕರಿಸಿ ಹಾಲಿ ಇರುವ ಶಾಲಾ ಕೊಠಡಿಯಲ್ಲೇ ಪ್ರೌಡ ಶಾಲೆಯನ್ನು ನಡೆಸಲಾಗುತ್ತಿದ್ದು, ಇತ್ತಿಚಿಗೆ ರಾಷ್ಟ್ರೀಯ ಹೆದ್ದಾರಿ -63ರ ದುರಸ್ತಿ ಹಾಗೂ ಅಗಲೀಕರಣ ಸಲುವಾಗಿ ಕೊಠಡಿಗಳು ಕಾಮಗಾರಿಗೆ ಒಳಪಟ್ಟಿರುವ ಕಾರಣ ಬದಲಿ ಭೂಮಿಯನ್ನು ಪರಿಶೀಲಿಸಿ ಶಾಲಾ ಕಟ್ಟಡ, ಮೈದಾನಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಜಾಗದ ಪರವಾದ ಗ್ರಾಮಸ್ಥರು ಮನವಿ ಸ್ಥಳದಲ್ಲೇ ಆರೋಪ ನಡೆಸಿದ ಘಟನೆ ನಡೆಯಿತು, ನಂತರ ಮಧ್ಯ ಪ್ರವೇಶಿಸಿದ ಪೊಲೀಸರು ಸಮಾಧಾನಗೊಳಿಸಿ ಕಳಿಸಿದರು.