ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರ ಆಯ್ಕೆ

ಸಂಜೆವಾಣಿ ವಾರ್ತೆಸಿರುಗುಪ್ಪ, ಆ.11:: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಎಮ್.ಎಲ್.ಎ) ಪಿಂಜಾರು ಗೇರಿಯಲ್ಲಿ ನೂತನವಾಗಿ ಎಸ್.ಡಿ.ಎಮ್.ಸಿ ಅಧ್ಯಕ್ಷರ ಆಯ್ಕೆ ಮಾಡಲಾಯಿತು.ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಿಂಜಾರು ಗೇರಿಯಲ್ಲಿ ಒಟ್ಟು 12 ಸದಸ್ಯರ ನಡುವೆ ಅವಿರೋಧವಾಗಿ ನೂತನ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಡಿ.ಖಾದರಭಾಷ ಆಯ್ಕೆಯಾದರು, ಉಪಾಧ್ಯಕ್ಷರಾಗಿ ಹೇಮಣ್ಣ ಆಯ್ಕೆಯಾದರು.ಸದಸ್ಯರಾದ ಎಮ್.ಪೀರಾಸಾಬ್, ಬಿ.ಬಸವರಾಜ, ಕೆ.ಶಕೀರಾಬಿ, ಬಸವರಾಜೇಶ್ವರಿ, ಕಾಮಾಕ್ಷಿ, ಬಿ.ಮಲ್ಲಿಕಾರ್ಜುನ, ಕಾಸಿಂಬೀ, ಅಭಿಬ್ ಭಾಷ, ಹುಲಿಗಮ್ಮ, ಇಮಾಮ್ ಹುಸೇನಿ ಹಾಗೂ ಶಾಲೆಯ ಮುಖ್ಯಗುರು ನಾಗರಾಜ, ಶಿಕ್ಷಕರಾದ ರಾಘಮ್ಮ, ಸುಹೇಬ್, ಅಕ್ಷಯ ಬೇಗಂ, ಗೌರವ ಶಿಕ್ಷಕ ಟಿ.ಎಸ್ ಸಿದ್ದಯ್ಯ, ಅಥಿತಿ ಶಿಕ್ಷಕರಾದ ವೈ.ಮಹಭಾಷ, ಕೆ.ಭಾಷಸಾಬ್, ಡಿ.ಮಸ್ತಾನಮ್ಮ, ಶಬೀರಭಾನು, ಸಿದ್ದಯ್ಯ ಇದ್ದರು.