ಶಾಲಾ ಆವರಣವನ್ನು ಉದ್ಯಾನವನ ಮಾಡಿದ ಸಿಬ್ಬಂದಿ

ಔರಾದ:ಜೂ:6: ಪಟ್ಟಣದ ಶಿಕ್ಷಕರ ಬಡಾವಣೆಯ ಆದರ್ಶ ವಿದ್ಯಾಲಯದ ಆವರಣ ಶಾಲಾ ಸಿಬ್ಬಂದಿಗಳ ಪರಿಶ್ರಮದಿಂದ ಹಚ್ಚಹಸಿರಾಗಿ ಉದ್ಯಾನವನದಂತೆ ಕಂಗೊಳಿಸುತ್ತಿದೆ. ಇಲ್ಲಿನ ಸಿಬ್ಬಂದಿಗಳು ಆವರಣದಲ್ಲಿ ವಿವಿಧ ರೀತಿಯ ಮರಗಳಾದ ಹುಣಸೆ ಮರ, ಟೆಂಗಿನ ಮರ, ಮಾವಿನ ಮರ, ನಿಂಬೆ ಹಣ್ಣಿನ ಮರ, , ನೆಲ್ಲೆಕಾಯಿ, ಕರಿಬೇವು, ನುಗ್ಗೆಕಾಯಿ ವಿವಿಧ ರೀತಿಯ ಹೂವಿನ ಮರಗಳನ್ನು ಹಚ್ಚುವಲ್ಲಿ ಯಶಸ್ವಿಯಾಗಿ ಪರಿಸರ ಪ್ರೇಮ ಮೆರೆದಿದ್ದಾರೆ.

ಶಾಲಾ ಅವಧಿ ನಂತರ ಸಿಬ್ಬಂದಿಗಳು ಆವರಣದಲ್ಲಿರುವ ಎಲ್ಲ ಮರಗಳಿಗೆ ನೀರುಣಿಸಿ ಆವರಣ ಸ್ವಚ್ಛಗೊಳಿಸಿ ತೆರಳುವರು. ಮಹಾಮಾರಿ ಕೋರೋನಾ ವೈರಸ್ ಸಂಕಟದ ಪರಿಣಾಮವಾಗಿ ಲಾಕ್ ಡೌನ್ ಮಾಡಿ ರಜೆ ಘೋಷಸಿದರು ಕೂಡ ರಜೆ ಇದೆ ಅಂತ ಯಾರು ಮನೆಯಲ್ಲಿ ಇರದೆ ದಿನನಿತ್ಯ ಶಾಲೆಗೆ ಬಂದು ಗಿಡಮರಗಳಿಗೆ ನೀರುಣಿಸುತ್ತ ಶಾಲಾ ಆವರಣದಲ್ಲಿ ಕಾರ್ಯದಲ್ಲಿ ತೊಡಗಿ ಇತರರಿಗೆ ಮಾದರಿಯಾಗಿದ್ದಾರೆ.
ಪರಿಸರ ಪ್ರೇಮಿ ಮುಖ್ಯಗುರು ಧೂಳಪ್ಪಾ ಮಾಳನೂರ, ಮಾಹಾದೇವ ಚಿಟಗಿರೆ ಲಾಕ್ ಡೌನ ಆದಾಗಿನಿಂದ ನಿರಂತರ ಶಾಲೆಗೆ ಬಂದು ಪರಿಸರ ಕಾಪಾಡುವದು ನಮ್ಮ ಕರ್ತವ್ಯ ಗಿಡ ಮರಗಳಿಂದ ನಮಗೆ ಆಮ್ಲಜನಕ ಸಿಗುತ್ತದೆ ಇವತ್ತಿನ ಈ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಕಾಣುತ್ತಿದ್ದೆವೆ ಮರ ಇದ್ದರೆ ಒಂದು ಸಿಲಿಂಡರ್ ಇದ್ದಹಾಗೆ ನಮ್ಮ ಶಾಲೆಯು ಹಚ್ಚು ಹಸಿರು ಕಾಣುವುದಕ್ಕೆ ನಮ್ಮ ಶಿಕ್ಷಕ ಓಂಕಾರ ಹೊಸಳ್ಳಿ ಹಾಗೂ ನಮ್ಮ ಸಿಬ್ಬಂದಿಗಳು ಕಾರಣ ನಾನು ಬರಿ ಲಾಕಡೌನ ಸಂದರ್ಭದಲ್ಲಿ ಸ್ವಚ್ಛತೆ ಮಾಡುವಲ್ಲಿ ಹಾಗೂ ನೀರು ಹಾಕುವದರಲ್ಲಿ ಮುಂದಾಗಿದ್ದೇನೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಪ್ರಾಂಶುಪಾಲ ಧೂಳಪ್ಪಾ ಮಾಳನೂರ ತಿಳಿಸಿದರು. ಇವರ ಕಾರ್ಯಕ್ಕೆ ಬಡಾವಣೆ ಜನ ಹಾಗೂ ಪಾಲಕರು ಹರ್ಷ ವ್ಯಕ್ತ ಪಡಿಸಿದ್ದಾರೆ.