ಶಾಲಾ ಆವರಣದಲ್ಲಿ ಬಂಥನಾಳಶ್ರೀ ಮೂರ್ತಿ ಅನಾವರಣ

ಇಂಡಿ:ಸೆ.3: ತಾಲ್ಲೂಕಿನ ಲಚ್ಯಾಣ ಗ್ರಾಮದ ಮೋರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆಯ ಮುಂಭಾಗದ ಆವರಣದಲ್ಲಿ ಈಚೆಗೆ ಇಲ್ಲಿನ ಹಳೆಯ ವಿದ್ಯಾರ್ಥಿ ಬಳಗದ ವತಿಯಿಂದ ನಿರ್ಮಿಸಿದ ಶೈಕ್ಷಣಿಕ ಕ್ರಾಂತಿಯ ಹರಿಕಾರ ಲಿಂ. ಶ್ರೀ ಸಂಗನಬಸವ ಮಹಾಶಿವಯೋಗಿಗಳ ಹಾಗೂ ಪವಾಡ ಪುರುಷ ಲಿಂ. ಶ್ರೀ ಸಿದ್ಧಲಿಂಗ ಮಹಾರಾಜರ ಶಿಲಾ ಮೂರ್ತಿಗಳ ಅನಾವರಣ ಕಾರ್ಯಕ್ರಮ ನೆರವೇರಿತು.

ಬಂಥನಾಳದ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳು ಈ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಬಂಥನಾಳ ಲಿಂ. ಶ್ರೀ ಸಂಗನಬಸವ ಮಹಾಶಿವಯೋಗಿಗಳು ತಮ್ಮ ಪ್ರವಚನದಿಂದ ಬಂದ ಕಾಣಿಕೆಯಲ್ಲಿ ನಾಡಿನ ಎಲ್ಲೆಡೆ ಶಾಲೆ ಕಾಲೇಜುಗಳನ್ನು ಸ್ಥಾಪಿಸಿ ಬಡವರ ಬಾಳು ಬೆಳಗಿದ ಪೂಜ್ಯರ ಮೂರ್ತಿ ಸರ್ಕಾರಿ ಶಾಲಾ ಆವರಣದಲ್ಲಿ ಅನಾವರಣಗೊಳ್ಳುತ್ತಿರುವದು ಸ್ಮರಣೀಯ ಎಂದರು.

ಗೋಳಸಾರದ ಅಭಿವನ ಶ್ರೀಪುಂಡಲಿಂಗ ಮಹಾಶಿವಯೋಗಿಗಳು ಸಾನಿಧ್ಯವಹಿಸಿದರು.