ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷತನದಿಂದ ಮಗು ಸಾವು ಎಫ್‍ಆಯ್‍ಆರ್‍ನಲ್ಲಿ ಯುಡಿಆರ್ ಮಾಡಿದ್ದು ತಪ್ಪು ಮರು ಪರಿಶೀಲನೆ ಮಾಡಿ: ಕೋಸುಂಬೆ

ಇಂಡಿ:ನ.24: ಪಟ್ಟಣದ ಆರ್.ಎಂ.ಶಹಾ ಶಾಲೆಯಲ್ಲಿ ಕುಡಿಯುವ ನೀರಿನ ಟಾಕಿ ಬಿದ್ದು ಮೃತ ಬಾಲಕ ಶಿವರಾಜ ರೋಡಗಿ ಕುರಿತು ಅನ್ ನ್ಯಾಚರಲ್ ಡೆಥ್ ಅಸಹಜ ಸಾವು ಎಂದು ಮಾಡಿದ್ದು ಎಫ್ ಆಯ್ ಆರ್ ಮಾಡಬೇಕಾಗಿತ್ತು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.
ಅವರು ಬುಧವಾರ ಆರ್.ಎಂ.ಶಹಾ ಶಾಲೆಯಲ್ಲಿ ಮೃತ ಬಾಲಕ ಶಿವರಾಜ ರೋಡಗಿ ಮನೆಗೆ ಭೇಟಿ, ನಂತರ ಆರ್.ಎಂ.ಶಹಾ ಶಾಲೆಗೆ ಭೇಟಿ ನಂತರ ತಹಸೀಲ್ದಾರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.
ನೀರಿನ ಟಾಕಿ ನೆಲ ಮಹಡಿಯಲ್ಲಿದೆ, ಅಲ್ಲಿ ಸಿಸಿಟಿವಿ ಕ್ಯಾಮೇರಾ ವ್ಯವಸ್ಥೆ ಇಲ್ಲ. ಅದಲ್ಲದೆ ನೀರಿನ ಟಾಕಿನ ಸ್ಟಾಂಡು ಸಂಪೂರ್ಣ ತುಕ್ಕು ಹಿಡಿದಿದ್ದು ಅದನ್ನು ಮೇಲಿಂದ ಮೇಲೆ ತಪಾಸಣೆ ಮಾಡಬೇಕಾಗಿತ್ತು ಮತ್ತು 2016 ರ ಮಕ್ಕಳ ಶಿಕ್ಷಣ ನೀತಿ ಕಾಯ್ದೆ ಅನ್ವಯ ಸರಕಾರ,ಅನುದಾನ ಸಹಿತ ಮತ್ತು ರಹಿತ ಶಾಲೆಗಳು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪೂರ್ವಭಾವಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ಅಹಿತಕರವಾಗಿ ನಡೆಯುವ ಘಟನೆಗಳ ಪಾಲನೆ ಮಾಡಲಾಗಿಲ್ಲ, ಅದಲ್ಲದೆ ಸಿಸಿಟಿವಿ ಅಳವಡಿಸಿದ್ದರೆ ಅದನ್ನು ತೋರಿಸಿ ಶಿಕ್ಷಣ ಸಂಸ್ಥೆಯ ತಪ್ಪಿಲ್ಲ ಎಂದು ಸಾಬೀತು ಪಡಿಸುವ ಬದಲಾಗಿ ಯುಡಿಆರ್ ಮಾಡಿಸಿರುವದು ತಪ್ಪು ಎಂದು ಪ್ರತಿಪಾದಿಸಿದರು.
ನಂತರ ಮೃತ ಬಾಲಕ ಶಿವರಾಜ ರೋಡಗಿ ಮನೆಗೆ ಭೇಟಿ ನೀಡಿ ಬಾಲಕನ ತಾಯಿಗೆ ಸಾಂತ್ವನ ಹೇಳಿದರು.
ಜಿಲ್ಲಾ ಮಕ್ಕಳ ಕ್ಷೇಮಾಭಿವೃದ್ಧಿ ಸಂಘದಿಂದ ತುರ್ತಾಗಿ ಒಂದು ಲಕ್ಷ 25 ಸಾವಿರ ಪರಿಹಾರ ಧನ ನೀಡಲು ಡಿಡಿಪಿಐ ಇವರಿಗೆ ನಿರ್ದೇಶನ ನೀಡಿದರು. ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ ಶಾಸಕ ಯಶವಂತರಾಯಗೌಡ ಪಾಟೀಲರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರನ್ನು ಮಾಧ್ಯಮದ ಮೂಲಕ ಮನವಿ ಮಾಡಿದರು.
ಸಂಸ್ಥೆಯ ನಿರ್ಲಕ್ಷ ಮೇಲು ನೋಟಕ್ಕೆ ಕಂಡು ಬರುತ್ತಿದ್ದು ಇನ್ನು ಮುಂದೆ ಶಿಕ್ಷಣ ಸಂಸ್ಥೆಗಳು 2016 ರ ಮಕ್ಕಳ ಶಿಕ್ಷಣ ನೀತಿ ಪಾಲಿಸಲು ತಿಳಿಸಲು ಡಿಡಿಪಿಐ ಇವರಿಗೆ ತಿಳಿಸಿ ಅದನ್ನು ಪಾಲಿಸದ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಜರುಗಿಸಲು ಕೇಳಿಕೊಂಡರು.
ತಹಸೀಲ್ದಾರ ಬಿ.ಎಸ್.ಕಡಕಬಾವಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚೌಹಾಣ,ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಸವರಾಜ ಜಿಗಳೂರ, ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ,ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ, ಸಿಡಿಪಿಒ ಗೀತಾ ಗುತ್ತರಗಿಮಠ,ಸಿಪಿಐ ರತನಕುಮಾರ ಜಿರಗಿಹಾಳ ಮೌನೇಶ ಪೋತದಾರ, ಗುರುರಾಜ ಇಟಗಿ ಮತ್ತಿತರಿದ್ದರು.