ಶಾಲಾ ಅಭಿವೃದ್ಧಿ ಸಮಿತಿ ರಚನೆ

ಧಾರವಾಡ,ಜು.24: ತಾಲೂಕಿನ ನರೇಂದ್ರ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಯಾಯಿತು.
ನೂತನ ಅಧ್ಯಕ್ಷರಾಗಿ ಮಹಾವೀರ ಹೊಸಮನಿ, ಉಪಾಧ್ಯಕ್ಷರಾಗಿ ಗೀತಾ ಗಂಟಿ ಮತ್ತು 16 ಜನ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪಾಲಕಪ್ರಾತಿನಿದಿಗಳು ನಿರ್ದೇಶಕರಾಗಿ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ನಾಮನಿರ್ದೇಶಿತ ಸದಸ್ಯರಾಗಿ ಗ್ರಾಮ ಪಂಚಾಯತ ಸದಸ್ಯ ಅಪ್ಪಣ್ಣ ಹಡಪದ ಮತ್ತು ಶಿಕ್ಷಣ ಪ್ರೇಮಿಯಾಗಿ ಮಂಜುಳಾ ತೇಗೂರ ಸಮಿತಿಗೆ ಆಯ್ಕೆಯಾದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಂಗಮ್ಮ ನಿರಂಜನ, ಉಪಾಧ್ಯಕ್ಷ ತಿರಕಯ್ಯ ಹಿರೇಮಠ, ಸದಸ್ಯರು, ಪಾಲಕರು, ಮುಖ್ಯೋಪಾಧ್ಯಾಯನಿ ವೈ.ಆರ್.ಕುರೇರ ಮತ್ತು ಶಿಕ್ಷಕರಿದ್ದರು.