ಶಾಲಾ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಕಾರ ಅತಿ ಮುಖ್ಯ:ರಾಠೋಡ

ಸೈದಾಪುರ:ಆ.1:ಇಲ್ಲಿಗೆ ಸಮೀಪದ ಲಿಂಗೇರಿ ಸ್ಟೇಷನ ಸರಕಾರಿ ಪ್ರೌಢ ಶಾಲೆಯಲ್ಲಿ ನೂತನ ಎಸ್‍ಡಿಎಂಸಿ ರಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಶಾಮು ರಾಠೋಡ ಮಾತನಾಡಿ, ಶಾಲಾ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಕಾರ ಅತಿ ಮುಖ್ಯವಾಗಿದೆ. ದಾಖಲಾತಿ ಸೇರಿದಂತೆ ಹಾಜರಾತಿ ಪ್ರಕ್ರಿಯೆಲ್ಲಿ ನೆರವು ನೀಡುವುದರ ಮೂಲಕ ಗುಣಮಟ್ಟದ ಶಿಕ್ಷಣ ರೂಪಿಸುವಲ್ಲಿ ಎಸ್‍ಡಿಎಂಸಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ನೂತನ ಎಸ್‍ಡಿಎಂಸಿ ಪದಾಧಿಕಾರಿಗಳು:ಶಿವುಪುತ್ರ ಬೈಲಪ್ಪನ್ನೋರ ಅಧ್ಯಕ್ಷರಾಗಿ, ಗಡ್ಡೆಪ್ಪ ಪೂಜಾರಿ ಉಪಾಧ್ಯಕ್ಷರಾಗಿ, ವೆಂಕಟರೆಡ್ಡಿ ಅರ್ಜುಣಿ, ಶರಣಪ್ಪ ಬಡಗೇರ, ಮಲ್ಲಪ್ಪ ಯರಗೋಳ, ಬಂಗಾರಪ್ಪ ಬೈಲಾಪ್ಪನ್ನೋರ, ಅಳ್ಳೆಮ್ಮ, ಶರಣಮ್ಮ, ಜಹೀದಾ ಬೇಗಂ ಸದಸ್ಯರಾಗಿ, ನಾಮ ನಿರ್ಧೇಶಿತ ಸದ್ಯರಾಗಿ ಶರಣಪ್ಪ ದಳಪತಿ, ಮಹಾದೇವಪ್ಪ ಬೈಲಾಪ್ಪನ್ಣೊರ, ಸಾಬಮ್ಮ ಆಯ್ಕೆಯಾಗಿದ್ದಾರೆ.