ಶಾಲಾ ಅಂಗಳದಲ್ಲಿ ವನ ಮಹೋತ್ಸವ ಕಾರ್ಯಕ್ರಮ ಅಂಧ ಮಕ್ಕಳ ಶಾಲೆಗೆ ಬೋರವೆಲ್ ಭರವಸೆ

ಅಫಜಲಪುರ: ಜು.2:ಉನ್ನತ ಮಟ್ಟದ ಸ್ಥಾನಮಾನ ಹಾಗೂ ಜೀವನ ಮಟ್ಟ ಹೊಂದಿದವರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಬೇಕು. ಅಂದಾಗ ಮಾತ್ರ ಜನ್ಮದಿನದ ಆಚರಣೆಯು ಅರ್ಥಪೂರ್ಣವಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ ತಿಳಿಸಿದರು.

ಪುರಸಭೆ ಸದಸ್ಯ ಶಿವಕುಮಾರ ಪದಕಿ ಹಾಗೂ ಪೌರ ಸೇವಾ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಚಲವಾದಿ ಅವರ ಜನ್ಮದಿನದ ಅಂಗವಾಗಿ ಪಟ್ಟಣದ ಹೊರವಲಯದಲ್ಲಿರುವ ಶ್ರೀ ನಾಗರಾಜ ಪದಕಿ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ತಾಲೂಕಾ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ವನ ಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಜನ್ಮದಿನವನ್ನು ಅವಿಸ್ಮರಣೀಯವಾಗಿರಿಸಲು ಮಕ್ಕಳಲ್ಲಿ ಪರಿಸರಿ ಜಾಗೃತಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ ಎಂದರು.

ನಂತರ ವಿ.ಕೆ.ಜಿ ಅಂಧ ಮಕ್ಕಳ ಶಾಲೆಗೆ ಭೇಟಿ ನೀಡಿದ ಶಿವಕುಮಾರ ಪದಕಿ ಹಾಗೂ ಸಂತೋಷ ಚಲವಾದಿ ಅವರು ಶಾಲೆಯಲ್ಲಿನ
ಅಂಧ ಮಕ್ಕಳಿಗೆ ಬಟ್ಟೆ ವಿತರಿಸಿ ಮೂಲಭೂತ ಸೌಕರ್ಯಗಳ ಕುರಿತು ವಿಚಾರಿಸಿದ ಅವರು ಮಕ್ಕಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಜಂಟಿಯಾಗಿ ಶೀಘ್ರದಲ್ಲೇ ಬೋರವೆಲ್ ಹಾಕಿಸುವುದಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

ಈ ವೇಳೆ ತಾಲೂಕಾ ಅರಣ್ಯಾಧಿಕಾರಿ ಸಂತೋಷ ಇಂಡಿ, ಶಾಲೆಯ ಮುಖ್ಯಗುರು ಎಂ.ಜಿ ಬಿರದಾರ, ಹಿರಿಯ ಪತ್ರಕರ್ತ ಶಿವಾನಂದ ಹಸರಗುಂಡಗಿ, ರಾಜಶೇಖರ ಪಾಟೀಲ್, ಶರಣು ಕುಂಬಾರ, ಶಿವಗೊಂಡಪ್ಪ ಪೂಜಾರಿ, ವಿನೋದ ರಾಠೋಡ, ವಿಶ್ವನಾಥ ಮಲಘಾಣ, ತಿಪ್ಪಣ್ಣ ಗಾಡಿವಡ್ಡರ, ಬಾಬಾ ಪಟೇಲ್, ಅರಣ್ಯ ಇಲಾಖೆಯ ಖಾಸೀಂ ಸೇರಿದಂತೆ ಅನೇಕರಿದ್ದರು.