ಶಾಲಾರಂಭ: ಸಕಲ ಸಿದ್ದ- ಗೋನಾಳ

ರಾಯಚೂರು,ಡಿ.೩೧- ಶಾಲೆಯ ಆರಂಭಕ್ಕಾಗಿ ೧೫ ರಿಂದ ೨೦ ವಿದ್ಯಾರ್ಥಿಗಳ ತಂಡವನ್ನು ರಚೆನೆ ಮಾಡಿಕೊಂಡಿದ್ದು ಈಗಾಗಲೆ ಪ್ರತಿ ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಯ ವೇಳಾಪಟ್ಟಿಯನ್ನ ಸಿದ್ದಪಡಿಸಿಕೊಂಡಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗೋನಾಳ ತಿಳಿಸಿದ್ದಾರೆ.
ಶಾಲಾ ಪ್ರಾರಂಬೋತ್ಸವಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು ಬಹುತೇಕ ಪಾಲಕರು ಅವರ ಇಚ್ಚೆಯನ್ನ ವ್ಯಕ್ತಪಡಿಸಿಕೊಂಡಿದ್ದರಿಂದ ಸಂಭ್ರಮದಿಂದ ಶಾಲೆಗಳನ್ನು ಪ್ರಾರಂಭ ಮಾಡಲಾಗುತ್ತಿದೆ. ಜನವೆರಿ ಹೊಸ ಕ್ಯಾಲೆಂಡರ್ ವರ್ಷ ಆರಂಭದ ಜೊತೆ ಜೊತೆಗೆ ಮುಚ್ಚಲಾಗಿದ್ದ ಶಾಲೆಗಳು ಪ್ರಾರಂಭ ವಾಗುತ್ತಿವೆ ಎಂದರು.
ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳನ್ನು ವಿಷಯ ಶಿಕ್ಷಕರು ಭೋದನೆ ಮಾಡುತ್ತಾರೆ. ಉಳಿದಂತೆ ವಿದ್ಯಾಗಮ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ತಂಡಗಳನ್ನು ರಚಿಸಿ ಎಲ್ಲಾ ಮಕ್ಕಳಿಗೆ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತದೆ.ಕಾರಣ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದೇ ಮುಖ್ಯ ಉದ್ದೇಶವಾಗಿದೆ ಎಂದರು.
ಮಕ್ಕಳಿಗೆ ಕೆಮ್ಮು, ನೆಗಡಿ, ಜ್ವರ ಕಂಡು ಬಂದಲ್ಲಿ ಕೂಡಲೇ ಪಾಲಕರು ಮಕ್ಕಳ ಕೋವಿಡ್ ಪರೀಕ್ಷೆ ಮಾಡಿಸಿ ನೆಗಿಟಿವ್ ಬಂದಲ್ಲಿ ಮಾತ್ರ ಶಾಲೆಗೆ ಕಳುಹಿಸಬೇಕು. ಯಾವುದೇ ಅನಾರೋಗ್ಯ ಸಮಸ್ಯೆಯಿಂದಿರುವ ಮಕ್ಕಳನ್ನು ಶಾಲೆಗೆ ಕಳುಹಿಸುವಂತಿಲ್ಲ.
ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರ ಒಪ್ಪಿಗೆ ಪತ್ರ ಪಡೆದು ಮಕ್ಕಳನ್ನು ಶಾಲೆಗೆ ತೆಗೆದುಕೊಳ್ಳಲಾಗುವುದು. ಒಪ್ಪಿಗೆ ಪತ್ರವಿಲ್ಲದೇ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಶಾಲೆಗೆ ಸೇರಿಸಿಕೊಳ್ಳಲಾಗುವುದಿಲ್ಲಾ. ಇದಕ್ಕೆ ಸಂಬಂದಿಸಿದಂತೆ ಎಲ್ಲಾ ಮುಖ್ಯೋಪದ್ಯಾಯರಿಗೆ ಒಪ್ಪಿಗೆ ಪತ್ರ ಪಡೆಯಲು ಸೂಚಿಸಲಾಗಿದೆ.
ಇಲ್ಲಿಯವರೆಗೂ ಶೇ.೫೦ ಶಿಕ್ಷಕರ ಕೋವಿಡ್ ಪರೀಕ್ಷೆ ಆಗಿದೆ. ಶಿಕ್ಷಕರ ಆರೋಗ್ಯವನ್ನು ಹಾಗೂ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.