ಶಾಲಾಮಕ್ಕಳಿಗೆ ಸಾವಿತ್ರಿಬಾಯಿ ಪುಲೆ ಜೀವನಾಧಾರಿತ ಚಲನಚಿತ್ರ ಪ್ರದರ್ಶನ

ದಾವಣಗೆರೆ.ಜು.೩೧; ನಗರದ ಗೀತಾಂಜಲಿ ಚಿತ್ರಮಂದಿರದಲ್ಲಿ ಇಂದು ಸಾವಿತ್ರಿ ಬಾಯಿ ಪುಲೆ ರವರ ಜೀವನ ಆಧಾರಿತ ಚಿತ್ರವನ್ನು ಶಾಲಾ ಮಕ್ಕಳಿಗಾಗಿ ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯರಾದ ವೈಎ ನಾರಾಯಣಸ್ವಾಮಿ ಹಾಗೂ ಚಿದಾನಂದ ಎಂ ಗೌಡ. ಅವರುಗಳು ಪುಷ್ಪಾರ್ಚನೆಯನ್ನು ಮಾಡಿ ಟೇಪ್ ಕತ್ತರಿಸುವ ಮೂಲಕ ಚಿತ್ರಕ್ಕೆ ಚಾಲನೆಯನ್ನು ನೀಡಿದರು.ನಂತರ ಮಾತನಾಡಿದ ಪರಿಷತ್ ಸದಸ್ಯ ವೈ.ಎ ನಾರಾಯಣಸ್ವಾಮಿ  ಸಾವಿತ್ರಿ ಬಾಪುಲೆ ಅವರು ಭಾರತ ದೇಶದ ಮೊಟ್ಟಮೊದಲ ಶಿಕ್ಷಕಿ ಅಕ್ಷರ ಕ್ರಾಂತಿಗೆ ಮುನ್ನಡೆ ಬರೆದಿದ್ದು. ಮಹಿಳೆ ಸಮಾಜದ ಬೆಳವಣಿಗೆಗೆ ಅಕ್ಷರಭ್ಯಾಸವೇ ಮೂಲ ಮಂತ್ರ ಎಂಬ ಯೋಚನೆ ಮಾಡಿ ಇಡೀ ದೇಶದಲ್ಲಿ ಮೊದಲ ಬಾರಿಗೆ ಅಕ್ಷರವನ್ನು ಕಲಿಸುವಂತಹ ಪರಂಪರೆಯನ್ನು ಆರಂಭ ಮಾಡಿದವರು. ಅವರ ಜೀವನ ಆಧಾರಿತ ಜ್ಯೋತಿರ್ ಬಾಪುಲೆ ಅವರ ಚಿತ್ರವನ್ನು  ಬಿಡುಗಡೆ ಮಾಡುತ್ತಿರುವುದು  ಸಂತೋಷವನ್ನುಂಟು ಮಾಡಿದೆ. ಚಿತ್ರದಲ್ಲಿ ನಟರಾದ ಸುಚೇಂದ್ರ ಪ್ರಸಾದ್ ಹಾಗೂ ನಟಿ ತಾರಾ ಅಭಿನಯಿಸಿದ್ದಾರೆ.ಈ ಚಿತ್ರವನ್ನು ನೋಡುವ ಮುಖಾಂತರ ಯುವ ಪೀಳಿಗೆಗೆ ಸಂದೇಶವನ್ನು ನೀಡಬೇಕು. ಈ ಚಲನಚಿತ್ರವು ಕೇವಲ ಚಿತ್ರವಲ್ಲ ಇದರ ಹಿಂದೆ ದೊಡ್ಡ ಉದ್ದೇಶ. ಕಲ್ಪನೆಯನ್ನು ಇಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಲಾಗಿದೆ. ಇಡೀ ಪ್ರಪಂಚದಲ್ಲಿ ಭಾರತ ದೇಶದಲ್ಲಿ ಗುರು ಪರಂಪರೆ. ಗುರುಕುಲ ಪದ್ಧತಿಯನ್ನು ಮೊದಲು ಪ್ರಾರಂಭ ಮಾಡಿದ್ದು ನಮ್ಮ ಭಾರತ ದೇಶ ಆಗಿನ ಕಾಲದಿಂದಲೂ ಇಲ್ಲಿಯವರೆಗೆ ಅಕ್ಷರ ಅಭ್ಯಾಸ ಮತ್ತು ವಿದ್ಯಾಭ್ಯಾಸದಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಇಡೀ ವಿಶ್ವಕ್ಕೆ ನಾವು ಮೊದಲಿದ್ದು. ತಾಂತ್ರಿಕ ಆಧಾರಿತ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ದೇಶಕ್ಕಿಂತ ಬೇರೆ ದೇಶ ಈ ವ್ಯವಸ್ಥೆಯಲ್ಲಿ ಮುಂದೆ ಇದೆ. ಮಾನವೀಯ ಮೌಲ್ಯಗಳಲ್ಲಿ ಶಿಕ್ಷಣ ಗುಣಾತ್ಮಕ ಶಿಕ್ಷಣದ ಮುಖಾಂತರ ಸಮಾಜವನ್ನು ಯಾವ ರೀತಿ ನಿರ್ಮಿಸಬೇಕು ಎಂಬುದನ್ನು ನಮ್ಮ ಹಿರಿಯರು ಹೇಳಿಕೊಟ್ಟಿದ್ದಾರೆ ಎಂದು  ತಿಳಿಸಿದರು.ಪರಿಷತ್ ಸದಸ್ಯ  ಚಿದಾನಂದ ಎಂ ಗೌಡ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಇಡೀ ದೇಶದಲ್ಲೇ ಪ್ರಾಥಮಿಕ ಮತ್ತು ಪ್ರೌಢಶಾಲಾ ಅಂತದಲ್ಲಿ ಬಹುಪಾಲು ಅಂದರೆ ಶೇಕಡಾ 75ರಷ್ಟು ಭಾಗ ಶಿಕ್ಷಕಿಯರೇ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುತ್ತಿದ್ದಾರೆ. ಮೊಟ್ಟಮೊದಲ ಮಹಿಳಾ ಶಿಕ್ಷಕಿಯಗಿ  ಸಾವಿತ್ರಿ ಬಾಪುಲೆ ಅವರು ಸ್ವತಂತ್ರದ ಪೂರ್ವದಲ್ಲಿ ಕಂಡ ಕನಸಿನಂತೆ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು ಆಗಿನ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡದ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು ಎಂಬ ಉದ್ದೇಶದಿಂದ ತಮ್ಮ ಸ್ವಂತ ಆಸ್ತಿಯನ್ನೇ ಮಾರಿ ಶಾಲೆಗಳನ್ನು ತೆರೆದ ವೀರ ಮಹಿಳೆ ಸಾವಿತ್ರಿ ಬಾಪುಲೆ ಇವರ ಜ್ಞಾಪಾರ್ಥಕವಾಗಿ ಹಲವಾರು ಮಹಿಳಾ ಶಿಕ್ಷಕಿ ಸಂಘಗಳು ಆರಂಭಗೊಂಡಿವೆ ಎಂದರು.  ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷರಾದ  ಕಲ್ಪನಾ ಮಾತನಾಡಿ ಮಕ್ಕಳು ಚಿತ್ರ ವೀಕ್ಷಣೆಗೆ ಆಗಮಿಸಿದ್ದಾರೆ ಅವತಿಗೆ ಸಾವಿತ್ರಿ ಬಾಯಿ ಪುಲೆ ಅವರ ಜೀವನ ಮಾದರಿಯಾಗಲಿದೆ ಎಂದರು. ಈ ವೇಳೆ . ಡಿ ಡಿ ಪಿ ಐ ಪರಮೇಶ್ವರಪ್ಪ, ಲಿಂಗರಾಜ್. ದುರ್ಗಪ್ಪ ಪುಷ್ಪಲತಾ. ಬಿ ಓ  ನಿರಂಜನ್, ಅಂಬಣ್ಣ
ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ದಾವಣಗೆರೆ ಎಲ್ಲಾ ಶಿಕ್ಷಕಿಯರು ಹಾಗೂ ಪದಾಧಿಕಾರಿಗಳು ಮತ್ತು ಶಾಲಾ ಮಕ್ಕಳು ಹಾಜರಿದ್ದರು.

Attachments area