ಶಾಲಾಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ಕಿಟ್ ವಿತರಣೆ.

ಹೊಳೆಸಿರಿಗೆರೆ.ಏ.೨: ಯೂತ್ ಫಾರ್ ಸೇವಾ ಹಾಗೂ ಟೆಕ್ಸಸ್ ಇನ್ಸ್ಟ್ರುಮೆಂಟ್ ಕಂಪನಿ ವತಿಯಿಂದ ತಾಲ್ಲೂಕಿನ ಹೊಳೆಸಿರಿಗೆರೆ ಗ್ರಾಮದ ಎ ಕೆ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ  ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ಪದಾರ್ಥಗಳನ್ನು ಶಾಲೆಯ ಎಲ್ಲಾ ಮಕ್ಕಳಿಗೂ  ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವ್ಯ, ಉಪಾಧ್ಯಕ್ಷೆ ಚಂದ್ರಕಲಾ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯ್ ಕುಮಾರ್, ಪತ್ರಕರ್ತರಾದ ವಿಶ್ವನಾಥ್ ಮೈಲಾಳ ಹೊಳೆಸಿರೆಗೆರೆ, ಮಂಜುನಾಥ್ ಜಿಎಂ ರಾಜನಹಳ್ಳಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶರಣ್ ಕುಮಾರ್ ಹೆಗಡೆ, ಇ ಸಿ ಓ ಅಶೋಕ ಕಾಳೆ, ಮುಖ್ಯೋಪಾಧ್ಯಾಯ ಎಚ್.ಎಮ್. ಸೋಮಣ್ಣ, ಶಿಕ್ಷಕರಾದ ಪಾಲಾಕ್ಷಪ್ಪ, ಚಂದ್ರಪ್ಪ, ದಾದಾಪೀರ್, ಶಿಕ್ಷಕಿ ಮಾರಮ್ಮ ಎಂ. ಗ್ರಾಮ ಪಂಚಾಯತಿ ಸದಸ್ಯ ಪ್ರಭು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದುರುಗಪ್ಪ ಮಾಳಿಗೇರ ಹಾಗೂ ಇನ್ನು ಮುಂತಾದ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.