ಶಾಲಾಮಕ್ಕಳಿಗೆ ಛತ್ರಿಗಳ ನೀಡಿದ ಸಿದ್ದರಾಮಯ್ಯ ಅಭಿಮಾನಿ

ದಾವಣಗೆರೆ.ಆ.೨; ಸಿದ್ದರಾಮಯ್ಯನವರ 75ನೇ ಜನ್ಮದಿನದ ಶುಭಾಶಯಗಳು ನಡೆಯುತ್ತಿರುವ ಸಿದ್ದರಾಮಯ್ಯ ಅಮೃತಮಹೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಕುಂದುವಾಡದ ಸರ್ಕಾರಿ ಶಾಲೆಯಲ್ಲಿ ಸಿದ್ದರಾಮಯ್ಯ ಅಭಿಮಾನಿ ಹಾಗೂ ಊರಿನ ಮುಖಂಡ ಸಂಪತ್ ಕುಮಾರ್ ಅವರಿಂದ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ. ಛತ್ರಿ ಗಳನ್ನು ಸ್ವಂತ ಖರ್ಚಿನಲ್ಲೇ ನೀಡಿದ್ದಾರೆ..ಇನ್ನು ಸಿದ್ದರಾಮತ್ಸವ ಜನ್ಮದಿನದಿಕ್ಕೆ  ಲಕ್ಷಾಂತರ ವೆಚ್ಚ ಮಾಡಿ ಪ್ರಚಾರಕ್ಕಾಗಿ ಬ್ಯಾನರ್ ಗಳನ್ನು ಹಾಕುತ್ತಿದ್ದಾರೆ ಆದರೆ ಅದು ದುಡ್ಡು ವೆಚ್ಚ ಅದಕ್ಕೆ ಬಳಸುವಂತಹ ಹಣದಲ್ಲೇ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಮಳೆಗಾಲದಲ್ಲಿ ಉಪಯೋಗವಾಗಲಿ ಎಂದು ಛತ್ರಿಗಳನ್ನು ನೀಡಲಾಗಿದೆ.ಇನ್ನು ಅದೇ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿ ಸಂಪತ್ ಕುಮಾರ್ ರವರು ಬಡಮಕ್ಕಳಿಗಾಗಿ ಚಿತ್ರಗಳನ್ನು ನೀಡಿದರು.ಈ ಒಂದು ಸಂದರ್ಭದಲ್ಲಿ ಊರಿನ ಮುಖಂಡರಾದ  ಗೌಡರ ಬಸವರಾಜಪ್ಪ . ಎಚ್ ಮಂಜುನಾಥ್ ಮೀನುಗಾರಿಕೆ  ಮಹಾಮಂಡಳಿಯ ನಿರ್ದೇಶಕರು ಮೈಸೂರು. ಅಣ್ಣಪ್ಪ. ಪ್ರಭಾಕರ್. ಸೋಮಶೇಖರ್ ರಮೇಶ್ ಮಂಜಪ್ಪ ಹಾಗೂ ಶಾಲೆಯ ಎಚ್  ಎಮ್ ಆನಂದಪ್ಪ. ಸೇರಿದಂತೆ ಶಾಲೆಯ ಆಡಳಿತ ಮಂಡಳಿಯವರು ಮತ್ತಿತರರು ಮಕ್ಕಳು ಹಾಜರಿದ್ದರು.