ಶಾಲಾಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳ ಸಹಕಾರ ಅಗತ್ಯ

ಪುತ್ತೂರು, ಎ.೨೧- ಶಾಲೆಯ ಬೆಳವಣಿಗೆಗೆ ಹಿರಿಯ ವಿದ್ಯಾರ್ಥಿಗಳ ಸಹಕಾರ ಅಗತ್ಯ. ಹಳೆ ವಿದ್ಯಾರ್ಥಿಗಳು ಒಂದಾದಾಗ ಶಾಲೆಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಸಲು ಸಾಧ್ಯವಾಗುತ್ತದೆ. ಶಾಲೆಯಲ್ಲಿ ಅಭಿವೃದ್ಧಿಯ ಅಗತ್ಯತೆ ಎದುರಾದಾಗ ಕುಂದು ಕೊರತೆಗಳನ್ನು ನಿವಾರಿಸುವ ಕೆಲಸ ನಡೆದಿದೆ. ಈ ಮೂಲಕ ಶತಮಾನ ಕಂಡ ಶಾಲೆಯಲ್ಲಿ ಅಭಿವೃದ್ದಿ ಕಾರ್ಯ ನಡೆಸಲು ಹಿರಿಯ ವಿದ್ಯಾರ್ಥಿಗಳಿಂದ ಸಾಧ್ಯವಾಗಿದೆ ಎಂದು ಕೊಂಬೆಟ್ಟಿನ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ವಸಂತ ಮೂಲ್ಯ ಹೇಳಿದರು.

ಕೊಂಬೆಟ್ಟು ಶಾಲೆಯಲ್ಲಿ ೧೯೭೨ ರಿಂದ ೧೯೭೭ರ ಅವಧಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಆಯೋಜಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆಗೆ ಯಾಕೆ ಅನುದಾನ ನೀಡಬೇಕು ಎಂಬ ಭಾವನೆ ಹಲವರಲ್ಲಿದೆ. ಈ ಭಾವನೆ ತಪ್ಪು. ಶಾಲೆಯ ಅಭಿವೃದ್ಧಿಗೆ ಸಹಕಾರ ಬೇಕೆಂದಾಗ ಹಿರಿಯ ವಿದ್ಯಾರ್ಥಿಗಳು ಕೈಜೋಡಿಸಿzರೆ. ಹಿರಿಯ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆ ಅಭಿವೃದ್ಧಿ ಕಂಡಿದೆ ಎಂದು ಹೇಳಿದರು. 

 ಕೊಂಬೆಟ್ಟಿನ ಸರ್ಕಾರಿ ವಿದ್ಯಾಸಂಸ್ಥೆಯ ನಿವೃತ್ತ ಶಿPಕಿ ಮೇರಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ದಾರಿ ತೋರಿಸುವ ಕೆಲಸ ಶಿPಕ ಮಾಡುತ್ತಾನೆ. ವಿದ್ಯಾಸಂಸ್ಥೆಯ ಮೇಲಿನ ವಿದ್ಯಾರ್ಥಿಗಳ ಅಭಿಮಾನ ಮಹತ್ವವಾದುದು.  ಹಿರಿಯ ವಿದ್ಯಾರ್ಥಿಗಳು ಒಟ್ಟು ಸೇರಿ ಗುರುವಂದನೆ ನೀಡಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ಶಿPಣ ನೀಡಿದ ಗುರುಗಳನ್ನು ನೆನೆದು ಕಾರ್ಯಕ್ರಮ ಮಾಡಿರುವುದು ಶಿPಕರ ಮೇಲಿನ ಗೌರವ ಹೆಚ್ಚುವಂತೆ ಮಾಡಿದೆ ಎಂದರು.

ಕೊಂಬೆಟ್ಟು ಪ್ರೌಢಶಾಲೆಯ ದೈಹಿಕ ಶಿPಕಿ ಗೀತಮಣಿ, ನಿವೃತ್ತ ಶಿPಕ ಬಾಲಚಂದ್ರ, ನಿವೃತ್ತ ಶಿPಕಿ ಮೇರಿ, ನಿವೃತ್ತ ಶಿPಕ ಹರಿನಾರಾಯಣ ಕೆದಿಲಾಯ, ನಿವೃತ್ತ ಶಿPಕರಾದ ಅಮ್ಮಣ್ಣ, ಉಮಾ ಇದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿPಕರಿಗೆ ಗುರುವಂದನೆ ಸಲ್ಲಿಸಲಾಯಿತು. ಹಳೆ ವಿದ್ಯಾರ್ಥಿ ಕವಿತಾ ಕಿಣಿ ಪ್ರಾರ್ಥಿಸಿದರು. ಹಳೆ ವಿದ್ಯಾರ್ಥಿ ಅಶೋಕ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.