ಶಾಲಾಕಾಲೇಜು ವೇಳಾಪಟ್ಟಿ ಬದಲಾವಣೆಗೆ ಆಗ್ರಹ

ಕಲಬುರಗಿ,ಜೂ 5: ಹೆಚ್ಚುತ್ತಿರುವ ತಾಪಮಾನ ಪ್ರಯುಕ್ತ ಶಾಲಾಕಾಲೇಜು ವೇಳಾಪಟ್ಟಿ ತಿದ್ದುಪಡಿಗಾಗಿ ಕರವೇ ಕಾವಲುಪಡೆ ರಾಜ್ಯ ವಕ್ತಾರ ಮಂಜುನಾಥ ನಾಲವಾರಕರ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವು ಕೂಡ ಶೇ,42,43 ರಷ್ಟು ತಾಪಮಾನ ಇದೆ. ಎರಡು ವರ್ಷಗಳಿಂದ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದು, ಅತಿ ತಾಪಮಾನದಿಂದ ವಿದ್ಯಾರ್ಥಿಗಳ ವೇಳೆ ಪಟ್ಟಿಯಲ್ಲಿ ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ.ಕನಿಷ್ಠ ಬೆಳಿಗ್ಗೆ ಸಮಯದಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭ ಮಾಡಬೇಕು ಎಂದು ಮನವಿ ಮಾಡಿದ್ದಾರೆ.