ಶಾರ್ಟ್ ಸರ್ಕಿಟ್ : ಮೇವಿನ ಬಣವಿ ಭಸ್ಮ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮೇ.16: ವಿದ್ಯುತ್ ಶಾರ್ಟ್ ಸರ್ಕೀಟ್‍ನಿಂದ ಬೆಂಕಿ ತಗುಲಿ ಮೂರು ಮೇವಿನ ಬಣವಿಗಳು ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಅಂಗೂರು ಗ್ರಾಮದಲ್ಲಿ ಜರುಗಿದೆ.
ಗ್ರಾಮದ ರೈತ ಚಂದ್ರಪ್ಪ ಬನ್ನಿಮಟ್ಟಿ ಅವರಿಗೆ ಸೇರಿದ ಹೊಟ್ಟು, ಮೇವಿನ ಬಣವಿಗಳು ಸುಟ್ಟಿವೆ. ಅವರ ಕಣದಲ್ಲಿ ಸಂಗ್ರಹಿಸಿಟ್ಟಿದ್ದ ಶೇಂಗಾ ಹೊಟ್ಟು, ಭತ್ತದ ಹುಲ್ಲಿನ ಬಣವೆಗಳಿಗೆ ವಿದ್ಯುತ್ ಶಾರ್ಟ್ ಸರ್ಕಿಟ್‍ನ ಬೆಂಕಿಯ ಕಿಡಿ ತಗುಲಿ ಹೊತ್ತಿ ಉರಿದಿದೆ.  ಬೆಂಕಿಯ ಜ್ವಾಲೆಗಳು ವ್ಯಾಪಿಸುತ್ತಿರುವಾಗ ಗ್ರಾಮದ ಜನರು ಧಾವಿಸಿ ಬಂದು ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಡೆದಿದ್ದಾರೆ.
‘ಶಾರ್ಟ್ ಸರ್ಕಿಟ್‍ನಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ಅಂದಾಜು 80 ಸಾವಿರ ರೂ. ಮೌಲ್ಯದ ಮೇವಿನ ಬಣವಿಗಳು ಭಸ್ಮವಾಗಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಹಾರ ನೀಡಬೇಕು’ ಎಂದು ರೈತ ಚಂದ್ರಪ್ಪ ಮನವಿ ಮಾಡಿದ್ದಾರೆ.