ಶಾರ್ಟ್ ಸರ್ಕಿಟ್ ನಿಂದ ಕಬ್ಬಿನ ಗದ್ದಿಗೆ ಬೆಂಕಿ

ಕಲಬುರಗಿ:ಏ.15: ಅಫಜಲಪೂರ ತಾಲೂಕಿನ ಅರ್ಜುಣಗಿ ಗ್ರಾಮದ ಪ್ರಗತಿಪರ ರೈತರಾದ ಶ್ರೀ ಶರಣಬಸಪ್ಪ ಅಪ್ಪಾರಾಯ ಮಾಲಿಪಾಟೀಲ್ ಅವರ ಕಬ್ಬಿನ ಗದ್ದಿಗೆ ಜೆಸ್ಕಾಂ. ಶಾರ್ಟ್ ಸರ್ಕಿಟ್ ನಿಂದ ಕಬ್ಬಿನ ಗದ್ದಿಗೆ ಬೆಂಕಿ ಬಿದ್ದು ಸುಮಾರು ಎರಡು ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ .

ಶರಣಬಸಪ್ಪ ಪಾಟೀಲರ ಜಮೀನಿನ ಮಧ್ಯೆ ಹಾಯ್ದು ಹೋದ ತಂತಿಗಳು ಜೋತು ಬಿದ್ದಿದ್ದವು ವೈರ್ ಗಳನ್ನು ಸರಿಪಡಿಸಲು ಜೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಸಲ ಮೌಖಿಕವಾಗಿ ತಿಳಿಸಿದರು ಏನು ಪ್ರಯೋಜನವಾಗಲಿಲ್ಲ . ಬಿಸಿಲಿನ ತಾಪ ಹೆಚ್ಚಾಗಿದ್ದು ಶಾರ್ಟ್ ಸಕ್ರ್ಯೂಟ್ ನಿಂದ ಎರಡು ಎಕರೆ ಕಬ್ಬಿನ ಗದ್ದಿ ಸುಟ್ಟು ಕರ್ಕಲಾಗಿದೆ .ಇದು ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಈ ಅವಘಡ ಸಂಭವಿಸಿದೆ. ರೈತ ಇಡಿ ವರುಷ ಕಷ್ಟಪಟ್ಟು ಬೆಳೆದ ಬೆಳೆ ಈ ರೀತಿ ಹಾನಿಯಾದರೆ ರೈತರ ಗತಿ ಏನು ,?ಎಂದು ರೈತ ಶರಣಬಸಪ್ಪ ಅಪ್ಪಾರಾಯ ಮಾಲಿ ಪಾಟೀಲ್ ಕಳವಳ ವ್ಯಕ್ತಪಡಿಸಿದರು. ತಕ್ಷಣವೇ ಸೂಕ್ತ ಪರಿಹಾರ ಒದಗಿಸಿ ಕೊಡಬೇಕೆಂದು ಆಗ್ರಹಿಸಿ ರೇವೂರ್ ಪೆÇಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.