
ಬೀದರ್:ಜ.21: ತಾಲ್ಲೂಕಿನ ಇಸ್ಲಾಮಪುರ್ ಗ್ರಾಮದಲ್ಲಿ ನಿನ್ನೆ ರಾತ್ರಿ ಶಾರ್ಟ್ ಸಕ್ರ್ಯೂಟ್ ನಿಂದ ಮನೆಯೊಂದು ಭಸ್ಮವಾಗಿದ್ದು ಮನೆಯಲ್ಲಿನ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿರುವ ಘಡನೆ ಬೆಳಕಿಗೆ ಬಂದಿದೆ.
ದತ್ತು ವಾಗ್ಮೊ_ರೆ ಎನ್ನುವವರ ಮನೆಯು ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಆಕಸ್ಮಿಕವಾಗಿ ಸಂಪೂರ್ಣ ಸುಟ್ಟು ಹೋಗಿದ್ದ ವಿಷಯ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷರು ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸೂರ್ಯಕಾಂತ ನಾಗಮಾರಪಳ್ಳಿ ಅವರ ಗಮನಕ್ಕೆ ಬಂದ ಕೂಡಲೇ ಅವರ ಸುಪುತ್ರ ತರುಣ ನಾಗಮಾರಪಳ್ಳಿ ಅವರನ ತತ್ತ್ ಕ್ಷಣದಲ್ಲೇ ಮನೆಗೆ ಭೇಟಿ ಮಾಡಲು ಸೂಚಿಸಿದ ಹಿನ್ನೆಲೆ ದತ್ತು ಅವರ ಮನೆಗೆ ಭೇಟಿ ನೀಡಿ ಬೆಂಕಿಗೆ ಆಹುತಿಯಾದ ಮನೆಯಲ್ಲಿನ ಫ್ರಿಡ್ಜ್ – ಟಿವಿ – ಅಡುಗೆ ಒಲೆ – ವಸ್ತ್ರ ಉಡುಪುಗಳು ಹಾಗೂ ಇನ್ನಿತರ ವಸ್ತುಗಳ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಹಾಗೂ ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ (ರಿ) ವತಿಯಿಂದ ವೈಯಕ್ತಿಕ ಪರಿಹಾರ ನೀಡಿದರು ಜೊತೆಗೆ ಅತಿ ಶೀಘ್ರದಲ್ಲೇ ಕರ್ನಾಟಕ ಸರ್ಕಾರದಿಂದ ಸೂಕ್ತ ನೆರವು ದೊರಕಿಸಿ ಕೊಡುವುದಾಗಿ ಇದೇ ವೇಳೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಗುರಪ್ಪ ರಕ್ಷೆ, ಹಣಮಂತ ವಾಗ್ಮೋರೆ, ಬಸವರಾಜ ಮೂಲಗೆ, ರವಿ ಜಾಧವ, ಟೀಮ್ ಖಿSಓ ನ ಯುವಕರಾದ ಯಲ್ಲಾಲಿಂಗ ಜೀರ್ಗೆ, ಮಾಣಿಕ ರಕ್ಷೆ, ರಾಜು ಜೀರ್ಗೆ ಹಾಗೂ ಗ್ರಾಮದ ಇನ್ನಿತರ ಹಿರಿಯರು, ಯುವಕರು ಉಪಸ್ಥಿತರಿದ್ದರು.