ಶಾರ್ಟ್ ಸಕ್ರ್ಯೂಟ್ ನಿಂದಸುಟ್ಟು ಕರಕಲಾದ ಮನೆ

ಅಫಜಲಪುರ: ಎ.5:ತಾಲೂಕಿನ ಅಳ್ಳಗಿ (ಬಿ) ಗ್ರಾಮದ ಶರಣಪ್ಪ ಜತ್ತಪ್ಪ ಪೂಜಾರಿ ಅವರ ಮನೆಗೆ ಶಾರ್ಟ್ ಸಕ್ರ್ಯೂಟ್ ನಿಂದಾಗಿ ಬೆಂಕಿ ತಗುಲಿ ಸುಮಾರು 5.50 ಲಕ್ಷ ರೂ. ಹಣ ಹಾಗೂ 40 ಗ್ರಾಂ ಬಂಗಾರ ಸೇರಿದಂತೆ ದವಸ ಧಾನ್ಯಗಳು ಮತ್ತು ಮನೆಯಲ್ಲಿನ ಇತರೇ ವಸ್ತುಗಳು ಸುಟ್ಟು ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಠಾಣಾಧಿಕಾರಿ ವಿಶ್ವನಾಥ ಕಾಮರೆಡ್ಡಿ ನೇತೃತ್ವದ ತಂಡದ ಸಿಬ್ಬಂದಿಗಳು ಬೆಂಕಿ ನಂದಿಸಿದರು. ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷರು, ಪಿ.ಡಿ.ಓ ಮತ್ತು ಆರ್.ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.