ಶಾರ್ಟ್ ಡ್ರೆಸ್‌ನಲ್ಲಿ ಮೌನಿ ರಾಯ್ ನ್ಯೂ ಲುಕ್

ಮುಂಬೈ,ಏ.೧೮-ಬಾಲಿವುಡ್ ನಟಿ ಮೌನಿ ರಾಯ್ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಪರ್ಪಲ್ ಶಾರ್ಟ್ ಡ್ರೆಸ್‌ನಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ಅಭಿಮಾನಿಗಳು ಅವರ ಫೋಟೋಗಳಿಗೆ ಪ್ರೀತಿಯ ಸುರಿಮಳೆ ಹರಿಸಿದ್ದಾರೆ . ಬಗೆ ಬಗೆಯ ಬರಹಗಳಿಂದ ಅವರ ಅಂದ ಚೆಂದವನ್ನು ಹಾಡಿ ಹೊಗಳಿದ್ದಾರೆ.
ನಾಗಿನ್ ಖ್ಯಾತಿಯ ಮೌನಿ ರಾಯ್ ತಮ್ಮ ಸೌಂದರ್ಯದಿಂದಲೇ ಹೆಸರು ಸಂಪಾದಿಸಿರುವ ಪ್ರತಿಭೆ. ಕಿರುತೆರೆಯಿಂದ ಹಿರಿತೆರೆಗೆ ಎಂಟ್ರಿ ಕೊಟ್ಟಿರುವ ಇವರು ಸಿನಿಮಾಗಳ ಜೊತೆ ಜೊತೆಗೆ ಸೋಷಿಯಲ್ ಮೀಡಿಯಾದ ಮೂಲಕವೂ ಸದ್ದು ಮಾಡುತ್ತಿರುತ್ತಾರೆ. ಇವರು ಹಂಚಿಕೊಂಡ ಬಹುತೇಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತವೆ. ಇವರ ಅಂದ ಚೆಂದದ ಫೋಟೋಗಳಿಗಾಗಿ ಅಭಿಮಾನಿಗಳು ಸಹ ಕಾದು ಕುಳಿತಿರುತ್ತಾರೆ. ಇನ್‌ಸ್ಟಾ ಖಾತೆಯಲ್ಲಿ ೨೬ ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಅನ್ನು ಸಂಪಾದಿಸಿರುವ ಇವರು, ಇದುವರೆಗೂ ಮೂರು ಸಾವಿರಕ್ಕೂ ಹೆಚ್ಚು ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ.
ಸದ್ಯ ನೀವು ಅವರ ಇನ್‌ಸ್ಟಾ ಪೇಜ್ ಓಪನ್ ಮಾಡಿದರೆ, ವಿಭಿನ್ನ ಸ್ಟೈಲಿಶ್ ಫೋಟೋಗಳನ್ನು ಕಾಣಬಹುದು. ತಮ್ಮ ವಿಶಿಷ್ಟವಾದ ಫ್ಯಾಶನ್ ಸೆನ್ಸ್ ಅನ್ನು ಫೋಟೋಗಳ ಮೂಲಕವೇ ರಿವೀಲ್ ಮಾಡುತ್ತಾರೆ. ಅವರು ಇತ್ತೀಚೆಗೆ ಪರ್ಪಲ್ ಡ್ರೆಸ್‌ನಲ್ಲಿ ತೆಗಿಸಿಕೊಂಡಿರುವ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.