ಶಾರ್ಟ್‌ಸರ್ಕ್ಯೂಟ್: ಟ್ರಾನ್ಸ್‌ಫಾರ್ಮರ್‌ ಭಸ್ಮ

ಉಡುಪಿ, ಎ.1೧- ಪರ್ಕಳದ ಕೆನರಾ ಬ್ಯಾಂಕ್ ಬಳಿ ವಿದ್ಯುತ್ ಶನಿವಾರ ಮಧ್ಯಾಹ್ನದ ಸಂಭವಿಸಿದ ಶಾರ್ಟ್‌ಸರ್ಕ್ಯೂಟ್ ನಿಂದಾಗಿ ಟ್ರಾನ್ಸ್‌ಫಾರ್ಮರ್ ಸಂಪೂರ್ಣ ಸುಟ್ಟು ಹೋಗಿರುವ ಬಗ್ಗೆ ವರದಿಯಾಗಿದೆ.

ಟ್ರಾನ್ಸ್‌ಫಾರ್ಮರ್‌ನಲ್ಲಿನ ಬೆಂಕಿಯು ಸಮೀಪದಲ್ಲಿರುವ ದಾಮೋದರ ಕಿಣಿ ಎಂಬವರ ಜಾಗಕ್ಕೂ ವಿಸ್ತರಿಸಿತ್ತೆನ್ನಲಾಗಿದೆ. ಬಳಿಕ ಸ್ಥಳೀಯರು ನೀಡಿದ ಮಾಹಿತಿ ಯಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಲು ಸಹಕರಿಸಿದರು. ಪರ್ಕಳದ ಬಳಿಯ ರಸ್ತೆ ವಿಸ್ತರಣೆ ಕಾಮಗಾರಿ ಹಿನ್ನೆಲೆಯಲ್ಲಿ ಈ ಟ್ರಾನ್ಸ್ ಫಾರ್ಮರ್ ಅನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. ಅದರ ನಂತರ ಈ ಟ್ರಾನ್ಸ್ ಫಾರ್ಮರ್‌ನಲ್ಲಿ ಇದೀಗ ಎರಡನೆ ಬಾರಿಗೆ ಶಾರ್ಟ್‌ಸರ್ಕ್ಯೂಟ್ ಉಂಟಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.