ಶಾರುಖ್ ಖಾನ್ ಗೆ ಮಗನ ಚಿಂತೆ : ಕಿಂಗ್ ಖಾನ್ ತನ್ನ ಬಹುಕಾಲದ ಬಾಡಿಗಾರ್ಡ್ ರವಿ ಸಿಂಗ್ ರನ್ನು ಆರ್ಯನ್ ಖಾನ್ ರಕ್ಷಣೆಗೆ ಇರಿಸಿದರು

ಶಾರುಖ್ ಖಾನ್ ರ ಮಗ ಆರ್ಯನ್ ಖಾನ್ ಕಾರ್ಡಿಯಲ್ ಕ್ರೂಸ್ ಡ್ರಗ್ ಕೇಸನಲ್ಲಿ ಸಿಲುಕಿದ ನಂತರ ಇನ್ನೂ ವಿವಾದಗಳಿಂದ ಹೊರಬರಲಾಗಲಿಲ್ಲ.ಪ್ರತೀ ವಾರವೂ ಎನ್ ಸಿ ಬಿ ಆಫೀಸ್ ಗೆ ಹೋಗಿ ಹಾಜರಿ ಹಾಕಿ ಬರಬೇಕು.
ಅಕ್ಟೋಬರ್ ೨೯ರಂದು ಜಾಮೀನಿನಲ್ಲಿ ಹೊರಬಂದ ನಂತರ ಆರ್ಯನ್ ಮೀಡಿಯಾ ಗಳಿಂದ ಮತ್ತು ಫ್ಯಾನ್ಸ್ ಗಳಿಂದ ದೂರವಿರಲು ಇಚ್ಚಿಸಿದ್ದಾನೆ.ಆದರೆ ಆಗಾಗ ಹೊರಗಡೆ ಹೋಗಿ ತಿರುಗಾಡಿ ಬರಲು ಸಾಧ್ಯವಾಗುತ್ತಿಲ್ಲ .
ಇದನ್ನು ಗಮನಿಸಿ ಶಾರುಖ್ ಖಾನ್ ಅದಕ್ಕೆ ತಕ್ಕ ವ್ಯವಸ್ಥೆಯನ್ನು ಮಾಡಿದ್ದಾರೆ. ಆರ್ಯನ್ ಜಾಮೀನಿನಲ್ಲಿ ಹೊರಬಂದ ನಂತರ ಆರ್ಯನ್ ಗಾಗಿ ಶಾರೂಖ್ ಬಾಡಿಗಾರ್ಡ್ ನ ಹುಡುಕಾಟದಲ್ಲಿದ್ದರು.ಇದೀಗ ಬಂದ ಬಾಲಿವುಡ್ ಸುದ್ದಿಯಂತೆ ಹೊಸ ಬಾಡಿಗಾರ್ಡ್ ಹುಡುಕುವ ಬದಲು ಶಾರುಖ್ ಖಾನ್ ತನ್ನ ಸೆಕ್ಯೂರಿಟಿ ಹೆಡ್ ರವಿ ಸಿಂಗ್ ಅವರನ್ನೇ ಆರ್ಯನ್ ಗಾಗಿ ಅಪಾಯಿಂಟ್ ಮಾಡಿದ್ದಾರೆ.
ಹಾಗೂ ಶಾರುಖ್ ಖಾನ್ ತನಗಾಗಿ ಹೊಸ ಬಾಡಿಗಾರ್ಡ್ ನ ವ್ಯವಸ್ಥೆಯನ್ನು ಮಾಡಲಿದ್ದಾರೆ.
ವರದಿಯ ಅನುಸಾರ ಶಾರುಖ್ ಖಾನ್ ಗೆ ಹೊಸ ಜನರು ಬರುವುದು ಇಷ್ಟ ಇಲ್ಲ .ಹೀಗಾಗಿ ತನ್ನ ಪರ್ಸನಲ್ ಬಾಡಿಗಾರ್ಡ್ ರನ್ನೇ ಆರ್ಯನ್ ಖಾನ್ ಗಾಗಿ ನಿಯುಕ್ತಿ ಗೊಳಿಸಿದ್ದಾರೆ. ಆರ್ಯನ್ ಖಾನ್ ಬಾಲ್ಯದಿಂದಲೇ ರವಿ ಸಿಂಗ್ ಜೊತೆಗಿದ್ದಾರೆ. ಹೀಗಾಗಿ ರವಿ ಪರಿಚಿತರೇ ಆಗಿದ್ದಾರೆ. ಆರ್ಯನ್ ಖಾನ್ ಜಾಮೀನಿನಲ್ಲಿ ಬಿಡುಗಡೆಯಾಗಿ ಬಂದಾಗ ಆತನನ್ನು ಕರೆ ತರಲು ಹೋದವರಲ್ಲಿ ರವಿಸಿಂಗ್ ಕೂಡಾ ಇದ್ದರು. ಕಳೆದ ಒಂದು ದಶಕದಿಂದ ಶಾರೂಖ್ ರ ಬಾಡಿಗಾರ್ಡ್ ಆಗಿ ರವಿ ಸಿಂಗ್ ಇದ್ದಾರೆ.ರವಿ ಅವರ ವಾರ್ಷಿಕ ಸಂಬಳ ೨.೭ ಕೋಟಿ ರೂಪಾಯಿ. ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಬಾಡಿಗಾರ್ಡ್ ಗಳಲ್ಲಿ ಇವರೂ ಒಬ್ಬರು.

ಸೀರೆ ಧರಿಸಿದ ಸ್ವರಾ ಭಾಸ್ಕರ್ ಗೆ ಟ್ರೋಲರ್ಸ್ ಹೇಳಿದ್ದು- “ನಿಮಗಿಂತ ಸೀರೆಯಲ್ಲಿ ನಮ್ಮ ಮನೆಯ ಕೆಲಸದಾಕೆ ಸುಂದರಿ ಇದ್ದಾಳೆ”

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸಕ್ರಿಯರಾಗಿರುವವರು. ಇತ್ತೀಚೆಗೆ ನಟಿ ತಾನು ಸೀರೆಯಲ್ಲಿರುವ ಒಂದು ಫೋಟೋವನ್ನು ಶೇರ್ ಮಾಡಿದ್ದಾರೆ.


ಇದಕ್ಕಾಗಿ ಬಹಳಷ್ಟು ನೆಟ್ಟಿಗರ ಪ್ರತಿಕ್ರಿಯೆಗಳು ಬಂದಿವೆ. ಓರ್ವ ನೆಟ್ಟಿಗನಂತೂ ಸ್ವರಾ ಭಾಸ್ಕರ್ ಅವರನ್ನು ತನ್ನ ಮನೆಯ ಕೆಲಸದಾಳು ಜೊತೆಗೆ ಹೋಲಿಸಿದ.
ಸ್ವರಾ ಭಾಸ್ಕರ್ ಪಾರ್ಕ್ ನಲ್ಲಿ ಸೀರೆ ಧರಿಸಿ ನಿಂತ ಒಂದು ಫೋಟೋವನ್ನು ಶೇರ್ ಮಾಡಿದ್ದರು. ಅದರ ಕ್ಯಾಪ್ಷನ್ ನಲ್ಲಿ ಬರೆದಿದ್ದರು- “ಒಂದು ಸೀರೆ, ಒಂದು ಪಾರ್ಕ್, ಒಂದು ಪ್ರವಾಸ, ಒಂದು ಪುಸ್ತಕ ಶಾಂತಿಗೆ ಸಾಕು. ಇದನ್ನು ಅನುಭವಿಸಬೇಕು”.
ಈ ಚಿತ್ರಕ್ಕೆ ಓರ್ವ ನೆಟ್ಟಿಗ ಬರೆದ- ನನ್ನ ಮನೆಯ ಕೆಲಸದಾಕೆ ಕೂಡ ಸೀರೆಯಲ್ಲಿ ಇರುತ್ತಾಳೆ. ಆದರೆ ನಿಮಗಿಂತ ಹೆಚ್ಚು ಸುಂದರಿ ಯಾಗಿರುತ್ತಾಳೆ. ನಿಮಗಿಂತ ಹೆಚ್ಚು ಗ್ರೇಸ್ ಅನಿಸುತ್ತದೆ ಎಂದಿದ್ದಾನೆ .
ಅದಕ್ಕೆ ಸ್ವರಾಭಾಸ್ಕರ್ ಪ್ರತಿಕ್ರಿಯಿಸುತ್ತಾ “ನನಗೆ ನಂಬಿಕೆ ಇದೆ ನಿಮ್ಮ ಮನೆಕೆಲಸದಾಕೆ ಬಹಳ ಸುಂದರಿ ಇದ್ದಾಳೆ ಅಂತ .ಆದರೆ ನಾನು ಆಶಾಭಾವನೆಯನ್ನು ಇರಿಸಿದ್ದೇನೆ -ಅವಳ ಕೆಲಸ ಮತ್ತು ಗೌರವಕ್ಕೆ ನೀವು ಒಂದು ಕ್ರಿಮಿಯ ತರಹ ತೊಂದರೆ ಕೊಡಲಾರಿರಿ ಎಂದು . ಇತ್ತೀಚೆಗೆ ಸ್ವರಾ ಭಾಸ್ಕರ್ ಕಂಗನಾ ರಣಾವತ್ ಜೊತೆಗೂ ಸೋಶಿಯಲ್ ಮೀಡಿಯಾದಲ್ಲಿ ವಿವಾದವನ್ನು ಎಬ್ಬಿಸಿದ್ದರು.

ಸುತಾಪಾ ಸಿಕದರ್ ಅವರಿಗೆ ಇರ್ಫಾನ್ ಖಾನ್ ರ ನಿಧನದ ನಂತರ ನಿದ್ದೆ ಸರಿ ಬರುತ್ತಿಲ್ಲವಂತೆ

ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ಪತ್ನಿ ಸುತಾಪಾ ಸಿಕದರ್ ಫಿಲ್ಮ್ ’ಕರೀಬ್ ಕರೀಬ್ ಸಿಂಗಲ್’ ನ ನಾಲ್ಕು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇರ್ಫಾನ್ ಅವರ ಇಚ್ಛೆಯನ್ನು ಸ್ಮರಿಸುತ್ತಾ ಇಮೋಷನಲ್ ನೋಟ್ ಬರೆದಿದ್ದಾರೆ.
ಹಾಗೂ ಇರ್ಫಾನ್ ಅಮಿತಾಭ್ ಬಚ್ಚನ್ ರ ಫಿಲ್ಮ್ ಸಿಲ್ ಸಿಲಾದ ಕವಿತಾ ’ತುಮ್ ಹೋತೀ ತೋ ಐಸಾ ಹೋತಾ’ ತನ್ನ ಸ್ವರದಲ್ಲಿ ಓದಲು ಇಚ್ಚಿಸಿದ್ದುದನ್ನೂ ತಿಳಿಸಿದ್ದಾರೆ.


ಸುತಾಪಾ ಅವರು ಇರ್ಫಾನ್ ರ ಒಂದು ಫೋಟೋ ಶೇರ್ ಮಾಡುತ್ತಾ ಬರೆದಿದ್ದಾರೆ- “ಒಂದುವರೆ ವರ್ಷದ ನಂತರವೂ ನಿದ್ದೆ ಬಾರದ ರೋಗ ಕಾಡುತ್ತಾ ಇದೆ. ಫೇಸ್ಬುಕ್ ಪ್ರತಿದಿನವೂ ಒಂದು ಹೊಸ ನೆನಪನ್ನು ತೋರಿಸುತ್ತಿದೆ” ಎಂದಿದ್ದಾರೆ.
ಇರ್ಫಾನ್ ಖಾನ್ ಕಳೆದ ವರ್ಷ ಎಪ್ರಿಲ್ ೨೯ ರಂದು ನಿಧನರಾಗಿದ್ದಾರೆ.