ಶಾರದ ಮೇಲೆ ಲೈಂಗಿಕ ಕಿರುಕುಳ ಆರೋಪಿ ಬಂಧನಕ್ಕೆ ಒತ್ತಾಯ

ರಾಯಚೂರು.ಮಾ.೦೪- ಅಂಗವಿಕಲ ಕಂಟೆಪ್ಪ ಹಾಗೂ ಕಾಳಮ್ಮ ಅವರ ಮಗಳು ಶಾರದ ಎಂಬುವರ ಮೇಲೆ ದಿನ ನಿತ್ಯ ಕಿರುಕುಳ ಮತ್ತು ಅತ್ಯಾಚಾರ ಯತ್ನಸಿದ ಗ್ರಾಮದ ೮ ಜನರ ಮೇಲೆ ಕಾನೂನು ಕ್ರಮ ಕೈಗೊಂಡು ರಕ್ಷಣೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಯಿಸಿದರು.
ಜಿಲ್ಲೆಯ ಮಸ್ಕಿ ತಾಲೂಕಿನ ಕಂಟೆಪ್ಪ ಹಾಗೂ ಕಾಳಮ್ಮ ದಂಪತಿಗಳ ವಿಕಲಚೇತನರಾಗಿದ್ದು ಮಸ್ಕಿ ತಾಲೂಕಿನ ಮ್ಯಾದ್ರಾಹಾಳ್ ನಿವಾಸಿಗಳಾಗಿರುತ್ತಾರೆ. ಇವರ ಮಗಳು ಶಾರದಾ ಎಂಬುವವರ ಮೇಲೆ ಊರಿನ ೬-೮ ಜನ ಅತ್ಯಚಾರ ಯತ್ನಿಸಿ ಹಾಗೂ ದಂಪತಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದರು.
ಶಾರದ ಮೇಲೆ ಅತ್ಯಚಾರ ಯತ್ನಿಸುವ ವೇಳೆ ತಾಯಿ ಮಗಳ ರಕ್ಷಣೆಯನ್ನು ಕೋರಿ ಚೀರಿದಾಗ ದುಷ್ಕರಿಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಆದರೆ ೮ ಜನ ಅಪರಾಧಿಗಳಲ್ಲಿ ಇಬ್ಬರ ಅಪರಾಧಿಗಳನ್ನು ವಶಕ್ಕೆ ತೆಗೆದುಕೊಂಡಿರುತ್ತಾರೆ. ಇನ್ನೂ ೬ ಜನರನ್ನು ಬಂಧಿಸಿರುವುದಿಲ್ಲಾ ಈ ವಿಚಾರ ಆಕ್ರೋಶಕ್ಕೆ ಕಾರಣವಾಗಿದೆ. ಶಾರದ ಅವರ ಕುಟುಂಬಕ್ಕೆ ಜೀವ ಬೆದರಿಕೆ. ಇರುವ ಕಾರಣ ಅವರಿಗೆ ರಕ್ಷಣೆಯನ್ನು ಒದಗಿಸಿಕೊಡಬೇಕು. ಸ್ಥಳಿಯ ಜನರ ಹಾಗೂ ವಿಕಲಚೇತನರ ಸಂಘಟನೆಗಳು ವಿಕಲಚೇತನ ವ್ಯಕ್ತಿಗಳ ಹಕ್ಕುಗಳನ್ನು ಸಂರಕ್ಷಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಕಲಚೇತನ ವ್ಯಕ್ತಿಗಳ ಅಧಿನಿಯಮ ೨೦೧೬ರ ನಿಯಮ ೯೨ರ(ಎ. ಮತ್ತು ಜಿ.ರ ಅನ್ವಯ ದೌರ್ಜನ್ಯ ಅಪರಾಧಿಗಳ ದಂಡನೆ ನಿಯಮದಡಿಯಲ್ಲಿ ಜಾರಿಗೆ ತಂದಿರುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ . ಮತ್ತು ಉಳಿದ ೬ ಜನ ಆರೋಪಿಗಳನ್ನು ಅತೀ ಶೀಘ್ರದಲ್ಲಿ ಬಂಧಿಸಿ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಂಡು ಬಂದಿಸಬೇಕು ಎಂದು ಒತ್ತಾಯಿಸಿದರು.
ರಕ್ಷಣೆ ನೀಡದಿದ್ದಲ್ಲಿ ಜಿಲ್ಲಾಡಳಿತ ಹೊಣೆಗಾರಿಕೆ ಎಂದು ದೂರಿದರು.
ಈ ಸಂದರ್ಭದಲ್ಲಿ ಹೊನ್ನಪ್ಪ, ಕರಿಯಪ್ಪ, ದಿಲ್ ರಾಜು, ಕಾಳಮ್ಮ, ಸೇರಿದಂತೆ ಉಪಸ್ಥಿತರಿದ್ದರು.