ಶಾರದಾ ನಗರದಲ್ಲಿ ರಮಾನಾಥ ರೈ ನೇತೃತ್ವದಲ್ಲಿ ಕೋವಿಡ್ ಕಿಟ್ ವಿತರಣೆ

ಬಂಟ್ವಾಳ, ಜೂ.೧೦-ಅಭಿವೃದ್ದಿ ಜೊತೆಗೆ ಸಮಾಜ ಸೇವೆ, ಸಮಾಜಮುಖಿ ಕಾರ್ಯಕ್ರಮಗಳು, ಸಮಾಜದಲ್ಲಿ ಸೌಹಾರ್ದತೆಯ ಉಳಿವು, ನೆಮ್ಮದಿಯ ವಾತಾವರಣ, ಜನರ ಆರೋಗ್ಯ ರಕ್ಷಣೆ, ಸಂಕಷ್ಟದ ಸಂದರ್ಭಗಳಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವ ಯುವಕರ ಪಡೆ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲೂ ಕಾರ್ಯಕರ್ತರ ಸೇವೆ ಇವೆಲ್ಲವುಗಳೂ ಇದ್ದಾಗ ಮಾತ್ರ ಸಮಾಜ ಸೇವೆಗೆ ಪರಿಪೂರ್ಣ ಅರ್ಥ ಬರುತ್ತದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಅಭಿಪ್ರಾಯಪಟ್ಟರು.
ತಾಲೂಕಿನ ಸಜಿಪಮುನ್ನೂರು ಗ್ರಾಮದ ಆಲಾಡಿ-ಶಾರದಾನಗರದಲ್ಲಿ ನಡೆದ ಕೋವಿಡ್-೧೯ ಎರಡನೇ ಅಲೆಯ ಕಠಿಣ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದಿರಾ ಕ್ಷೇಮ ನಿಧಿಯ ವತಿಯಿಂದ ಕೋವಿಡ್ ಪಾಸಿಟಿವ್ ಬಂದ ಮನೆಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಸಂದರ್ಭ ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಸಜಿಪಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ, ತಾ ಪಂ ಮಾಜಿ ಸದಸ್ಯ ಶರೀಫ್ ಆಲಾಡಿ, ಸಜಿಪಮುನ್ನೂರು ಗ್ರಾ ಪಂ ಮಾಜಿ ಸದಸ್ಯ ಕಬೀರ್ ಗಡಿಯಾರ, ಎಸ್ಕೆಎಸ್ಸೆಸ್ಸೆಫ್ ಆಲಾಡಿ ಘಟಕಾಧ್ಯಕ್ಷ ಹಕೀಂ ಆಲಾಡಿ, ಮಲಾಯಿಬೆಟ್ಟು ಘಟಕಾಧ್ಯಕ್ಷ ಇಕ್ಬಾಲ್ ಪಡ್ಪು, ಸಜಿಪ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಯೂಸುಫ್ ಮಜಲ್ಪಾದೆ, ಆಲಾಡಿ ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಯೂಸುಫ್ ಆಲಾಡಿ, ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಎಡ್ಮಿನ್ ಇಬ್ರಾಹಿಂ ಮಲಾಯಿಬೆಟ್ಟು, ಪ್ರಮುಖರಾದ ಮನೋಹರ ಶಾರದಾನಗರ, ಕರೀಂ ತನ್ನಚ್ಚಿಲ್, ನೌಶಾದ್ ತನ್ನಚ್ಚಿಲ್, ರಫೀಕ್ ಕರಂದಾಡಿ, ಇಬ್ರಾಹಿಂ ಮುಸ್ಲಿಯಾರ್ ಆಲಾಡಿ, ಅಬೂಬಕ್ಕರ್ ಶಾರದಾನಗರ, ಇಬ್ರಾಹಿಂ ಯಾನೆ ಮೋನು ಶಾರದಾನಗರ, ಅಶ್ರಫ್ ಶಾರದಾನಗರ, ಅಬ್ದುಲ್ ಖಾದರ್ ತನ್ನಚ್ಚಿಲ್, ಅಬ್ದುಲ್ ಅಝೀಝ್ ನಂದಾವರ-ಕೊಪ್ಪಳ, ರಹಿಮಾನ್ ಉದ್ದೊಟ್ಟು ಮೊದಲಾದವರು ಭಾಗವಹಿಸಿದ್ದರು.