ಶಾರದಳ್ಳಿ ದಿ,ಬಾಪುಗೌಡರ ಪ್ರತಿಮೆ ಅನಾವರಣ, ದಿ,ಬಾಪುಗೌಡರ ಸಿದ್ದಾಂತಗಳು ಸಮಾಜಕ್ಕೆ ಸ್ಪೂರ್ತಿ: ರಾಜಾ ವೆಂಕಟಪ್ಪನಾಯಕ

ಶಹಾಪುರ:ನ.16:ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕವಾಗಿ ಅಭಿವೃದ್ದಿಗೊಳಿಸುವಲ್ಲಿ. ಸಂಘ ಸಂಸ್ಥೆಗಳು ಶ್ರಮಿಸಬೇಕು.ಹಿರಿಯರ ಅದರ್ಶಗಳು. ಹೋರಾಟಗಾರರ ಸಿದ್ದಾಂತಗಳನ್ನು ಮೈಗೂಡಿಸಿÀಕೊಂಡು ಮುನ್ನಡೆದಿದ್ದಲ್ಲಿ ನಮ್ಮ ಬದುಕಿನ ಹಾದಿಗೆ ಸ್ಪೂರ್ತಿಯಾಗುತ್ತದೆ ಎಂದು ಸುರುಪುರ ಮಾಜಿ ಶಾಸಕರಾದ, ರಾಜಾ ವೆಂಕಟೇಪ್ಪನಾಯಕ ಕರೆ ನೀಡಿದರು. ಅವರು ತಾಲುಕಿನ ಶಾರದಳ್ಳಿ ಗ್ರಾಮದಲ್ಲಿ ಕ್ರಾಂತಿ ವೀರ ಸಂಗೋಳಿ ರಾಯಣ್ಣ ಮತ್ತು ಅಭಿವೃದ್ದಿ ಹರಿಕಾರ ದಿವಂಗತ ಬಾಪುಗೌಡ ದರ್ಶನಾಪುರವರ ಪುತಳಿಗಳನ್ನು ಅನಾವರಣ ಮಾಡಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಅಂದು ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಬುದುÀಕಿನ್ನೂದ್ದಕ್ಕೂ ಭವಣೆಗಳನ್ನೊತ್ತು ನರಳುತ್ತಿದ್ದ ಕಾಲಘಟ್ಟದಲ್ಲಿ, ನೊಂದವರನ್ನು ಸಂತೈಸಿದ ಪ್ರಗತಿಪರ ಚಿಂತಕ, ಜನಾನುರಾಗಿ ದಿವಂಗತ ಬಾಪುಗೌಡರು ಅಮೋಘಸಾಧನೆಗಳನ್ನು ಮಾಡಿ ಇಂದು ಸರ್ವರಿಗೂ ಮಾದರಿಯಾಗಿ ದಾರಿ ದೀಪವಾಗಿದ್ದಾರೆ. ಹಿರಿಯರನ್ನು ಸ್ಮರಣೆಮಾಡುವದು ಅವರ ತತ್ವಗಳನ್ನು ಮನನ ಮಾಡಿಕೊಳ್ಳುವದು ಇಂದಿನ ಯುವ ಸಮಾಜಕ್ಕೆ ಅಗತ್ಯವಾಗಿದೆ ಎಂದು ರಾಜಾ ವೆಂಕಟೇಪ್ಪನಾಯಕ ಹೆಳಿದರು. ಮಾಜಿ ಸಚಿವ ಶಾಸಕರಾದ ಶರಣಬಸ್ಸಪ್ಪಗೌಡÀ ದರ್ಶನಾಪುರ .ಮರಿಗೌಡ ಹುಲಕಲ್. ಯುವ ಜಿಲ್ಲಾಧ್ಯಕ್ಷರಾದ ರಾಜಕುಮಾರನಾಯಕ. ಮಲ್ಲಣಗೌಡ ವಿನೋಧರಡ್ಡಿ. ಈರಣಗೌಡ ಕಾಳಪ್ಪ ದೇವಿಕೇರಿ. ಶರಣಪ್ಪ ಸಲಾದಪುರ.ವೆಂಕೋಬಸಾಹು. ಮಲ್ಲಣ್ಣ.ಹಣಮಂತ್ರಾಯ ಮಕಾಶಿ. ದಾವೂದ ಇಬ್ರಾಹಿಂ, ಪಠಾಣ್. ಅಜೀಮ ಜಮಾದಾರ. ಶಾರದಳ್ಳಿ ಗ್ರಾಮದ ಗಣ್ಯರು ನಾಗರಿಕ ಬಂಧುಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕ್ರಾಂತಿ ವೀರ ಸಂಗೋಳಿ ರಾಯಣ್ಣನವರ ದೀಟ್ಟತ್ತನಗಳು ಇಂದಿನ ಯುವಕರಿಗೆ ಸ್ಪೂರ್ತಿಯಾಗಲಿ. ರಾಯಣ್ಣನವರ ದೇಶಭಕ್ತಿ ಪ್ರತಿಯೊಬ್ಬ ಯುವಕರ ಹೃದಯದಲ್ಲಿ ಮೂಡಿ ಬರಲಿ. ಎಂದು ಆಶಿಸುತ್ತಾ ನಾಯಕರ ತತ್ವ ಸಿದ್ದಾಂತಗÀಳನ್ನು ಯುವ ಶಕ್ತಿ ಅರಿತುಕೊಳ್ಳಬೇಕು. ಆರೋಗ್ಯ ಸಮಾಜ ನಿರ್ಮಾಣಕ್ಕೆ ಯುವಕರು ಮುಂದಾಗಬೇಕು. ದುರ್ಭಲರ ಬಡವರ ಕಷ್ಟಗಳಿಗೆ ಯುವ ಸಂಘಟನೆಗಳು ಸಹಕಾರಗಳನ್ನು ನೀಡಿ ಕ್ರಾಂತಿ ವೀರ ಸಂಗೋಳಿ ರಾಯಣ್ಣನವರ ಆದರ್ಶಗಳನ್ನು ನೊಂದವರಿಗೆ ಶಕ್ತಿಸ್ವರೂಪವಾಗಲಿ ಎನ್ನುವದು ಆಸೆಯಾಗಿದೆ.
ಶರಣಬಸ್ಸಪ್ಪಗೌಡ ದರ್ಶನಾಪುರ
ಮಾಜಿ ಮಂತ್ರಿಗಳು ಶಾಸಕರು ಶಹಾಪುರ