ಶಾಮ್ ಪ್ರಸಾದ್ ಮುಖರ್ಜಿ ಜನ್ಮ ದಿನಾಚರಣೆ

ಮಾಲೂರು.ಜು೮:ಪಟ್ಟಣದ ಅರಲೇರಿ ರಸ್ತೆಯ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಿಜೆಪಿ ಪಕ್ಷದ ಸಂಸ್ಥಾಪಕರಾದ ಶಾಮ ಪ್ರಸಾದ್ ಮುಖರ್ಜಿರವರ ಜನ್ಮದಿನಾಚಾರಣೆಯ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಮನ ಅರ್ಪಿಸಿ ಜನ್ಮ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಎಸ್.ಟಿ ಮೋರ್ಚಾ, ಅಧ್ಯಕ್ಷ ಗೋವಿಂದಸ್ವಾಮಿ ಶ್ಯಾಂಪ್ರಸಾದ್ ಮುಖರ್ಜಿಯವರು ಬಿಜೆಪಿ ಪಕ್ಷದ ಸಂಸ್ಥಾಪಕರಾಗಿ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಲು ಶ್ರಮವಹಿಸಿದ್ದಾರೆ. ಅದರ ಫಲವೇ ಪ್ರಸ್ತುತ ಬಿಜೆಪಿ ಪಕ್ಷ ದೇಶದಲ್ಲಿ ಎರಡನೇ ಬಾರಿಗೆ ಆಡಳಿತವನ್ನು ನಡೆಸುತ್ತಿದೆ. ಶ್ಯಾಂಪ್ರಸಾದ್ ಮುಖರ್ಜಿಯವರು ರಾಷ್ಟ್ರೀಯ ಶಿಕ್ಷಣವಾದಿಯಾಗಿ, ಪ್ರಕರ ಹಿಂದೂವಾದಿಯಾಗಿ, ಜಮ್ಮು ಕಾಶ್ಮೀರದಲ್ಲಿ ೩೭೦ರ ಕಾಯ್ದೆಯನ್ನು ರದ್ದುಗೊಳಿಸಬೇಕು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು, ದೇಶಾದ್ಯಂತ ಏಕರೂಪ ನಾಗರೀಕ ಸಂಹಿತೆ ಕಾನೂನು ಜಾರಿಯಾಗಬೇಕು ಎಂಬ ಕನಸನ್ನು ಕಂಡವರು. ಪ್ರಸ್ತುತ ದೇಶದಲ್ಲಿ ಬಿಜೆಪಿ ಪಕ್ಷದ ಆಡಳಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಅವರು ಕನಸು ಕಂಡಿದ್ದನ್ನು ನನಸು ಮಾಡುತ್ತಿದೆ.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನಪರ ಆಡಳಿತವನ್ನು ನೀಡುತ್ತಿದ್ದು, ಮುಂಬರುವ ವ? ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಮೂರನೇ ಬಾರಿಗೆ ಬಿಜೆಪಿ ಪಕ್ಷ ಆಡಳಿತಕ್ಕೆ ಬರಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳು ಮೆಚ್ಚಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತ ಒಪ್ಪಿ ಡಾ.ಶರಣ್ಯ ಸಂತೋ? ರವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕುಮಾರ್. ಪುರಸಭಾ ಸದಸ್ಯ ಶ್ರೀನಿವಾಸ, ಮಾಜಿ ಸದಸ್ಯ ಪಚ್ಜಪ್ಪ, ರಾಮಮೂರ್ತಿ,ಒಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಚಲಪತಿ, ಎಸ್.ಸಿ ಮೋರ್ಚಾ ಪ್ರ.ಕಾರ್ಯದರ್ಶಿ ಭಾಗ್ಯಮ್ಮ, ಅರಲೇರಿ ಗ್ರಾ.ಪಂ.ಅಧ್ಯಕ್ಷರಾದ ಮಂಜುಳಾ ಶ್ರೀನಿವಾಸ, ಬಿಂಗಿಪುರ ನಾರಾಯಣಸ್ವಾಮಿ, ಪ್ರಸನ್ನಕುಮಾರ್ ಗೌಡ, ಕಿರಣ್ ರಾವ್, ವಾಟರ್ ಮಾಣಿ, ತಿಲಕ್, ಅಮರ್ ಬೀಮಾ, ಮುರಳಿ, ಇನ್ನಿತರ ಕಾರ್ಯಕರ್ತರು ಹಾಜರಿದ್ದರು.