ಶಾಮನೂರು ಶಿವಶಂಕರಪ್ಪ ಅವರನ್ನು ಉಚ್ಛಾಟಿಸಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜ.28-ಕಾಂಗ್ರೆಸ್ ಜೀವಂತವಾಗಿದ್ದರೇ ಮೊದಲು ಶಾಮನೂರು ಶಿವಶಂಕರಪ್ಪ ಅವರನ್ನು ಉಚ್ಛಾಟಿಸಿ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ಹೇಳಿದರು.
ಸಂಸದಬಿ.ವೈ.ರಾಘವೇಂದ್ರ ಪರ ಬ್ಯಾಟ್ ಬೀಸಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಗುಂಡ್ಲುಪೇಟೆಯಲ್ಲಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಜೀವಂತವಾಗಿದ್ದರೇ ಮೊದಲು ಶಿವಶಂಕರಪ್ಪ ಅವರನ್ನು ಉಚ್ಛಾಟಿಸಬೇಕು ಎಂದು ಆಗ್ರಹಿಸಿದರು. ಶಿವಶಂಕರಪ್ಪ ರಾಜಕೀಯ ಮುತ್ಸದಿಯಲ್ಲ, ಜಾತಿವಾದಿ, ಪಕ್ಷದ ಹಾಳಾದರೂ ನೆಂಟಸ್ತಿಕೆ ಉಳಿಸಿಕೊಳ್ಳುವ ಮಾತನಾಡಿದ್ದಾರೆ, ಕಾಂಗ್ರೆಸ್ ನಿಂದಗೆದ್ದು ಅವರ ಮಗನನ್ನು ಸಚಿವರನ್ನಾಗಿ ಮಾಡಿ ಬೇರೆ ಪಕ್ಷದ ಪರಕ್ಯಾನ್ವಾಸ್ ಮಾಡುವುದು ಎಷ್ಟು ಸರಿಎಂದು ಪ್ರಶ್ನೆ ಮಾಡಿದರು.
ಶಾಸಕರಿಗೆ ನಿಗಮ ಮಂಡಲಿ ಬೇಡ: ಶಾಸಕರಿಗೆ ನಿಗಮ ಮಂಡಲಿ ಸ್ಥಾನಗಳನ್ನು ಕೊಡಬಾರದು, ಎಂಎಲ್‍ಎ ಸ್ಥಾನವೂ ಅವರಿಗೆ, ನಿಗಮ ಅಧ್ಯಕ್ಷಗಿರಿಯೂ ಅವರಿಗೆ ಎಂದರೆ ಹೇಗೆ..? ಬಾವುಟ ಕಟ್ಟುವ ಕಾರ್ಯಕರ್ತರು ಏನು ಮಾಡಬೇಕು, ಶಾಸಕ ಸೂಚಿಸಿದ ಕಾರ್ಯಕರ್ತರಿಗೆ ಬೇಕಾದರೇ ನಿಗಮ ಮಂಡಲಿ ಕೊಡಲಿ, ಶಾಸಕರಿಗೆ ನಿಗಮ ಮಂಡಲಿ ಅಧ್ಯಕ್ಷ ಸ್ಥಾನ ಕೊಡಬಾರದು ಎಂದು ಅಭಿಪ್ರಾಯಪಟ್ಟರು. ಮೋದಿ ಬಗ್ಗೆ ಜೋಕ್ :ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಈಗ ಯಾರೋ ನನ್ನ ಮೊಬೈಲ್ ಗೆ ಒಂದು ಸಂದೇಶ ಕಳುಹಿಸಿದ್ದಾರೆ” ಹೆಂಡತಿ ಬಿಟ್ಟರಾಮನನ್ನು- ಹೆಂಡತಿತೊರೆದ ಪ್ರಧಾನಿ ಪೂಜಿಸುವುದುಎಷ್ಟು ಸರಿ” ಎಂಬುದು ಬಂದಿದೆ. ಇದನ್ನು ಹೇಳಿದರೆ ನಾನು ರಾಮನ ವಿರೋಧಿ ಅಂತಾರೆ, ಆ ರೀತಿಯಲ್ಲ, ಜನನಾಯಕರ ನಡೆ-ನುಡಿ ವೈರುಧ್ಯಗಳಿಂದ ಕೂಡಿರುವುದರಿಂದ ಜನರು ಯಾರೂ ಯಾರೂ ಜನನಾಯಕನಿಗೆ ಗೌರವ ಕೊಡುತ್ತಿಲ್ಲ ಎಂದರು.