ಶಾಮನೂರು ಕುಟುಂಬದಿಂದ ಹೃದಯ ಶ್ರೀಮಂತಿಕೆ ; ಡಿ.ಕೆ ಶಿವಕುಮಾರ್ ಶ್ಲಾಘನೆ

ದಾವಣಗೆರೆ.ಜೂ.4; ಕೊರೊನಾ ಲಸಿಕೆ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜಿನ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ದೇಶದಲ್ಲೇ ಪ್ರಥಮಬಾರಿಗೆ ಉಚಿತ ಲಸಿಕೆ ನೀಡುವ ಮೂಲಕ ಶಾಮನೂರು ಕುಟುಂಬ ಮತ್ತು ಮಕ್ಕಳು ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ರಾಜ್ಯ ಸರ್ಕಾರದ ಬಗ್ಗೆ ಹಾಗೂ ಲಸಿಕೆ ನೀಡುವಲ್ಲಿನ ವೈಫಲ್ಯದ ಕುರಿತು ಟೀಕೆ ಮಾಡುವ ಸಮಯ ಇದಲ್ಲ.ಲಸಿಕೆಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಕಾಂಗ್ರೆಸ್ ಪಕ್ಷದಿಂದ 100 ಕೋಟಿ ರೂ ನೀಡಲು ಮುಂದಾಗಿದ್ದೆವು.ವೆAಟಿಲೇಟರ್ ಸೇರಿದಂತೆ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಲು ಅನುದಾನ ನೀಡಲು ಮುಂದಾಗಿದ್ದೇವು.ಅಲ್ಲದೇ ಶಾಸಕರ ಅನುದಾನವಾದ 50 ಲಕ್ಷವನ್ನು ಲಸಿಕೆಗೆ ಬಳಸಲು ಅನುಮತಿ ಕೇಳಿದರೂ ಅನುಮತಿ ನೀಡಲಿಲ್ಲ ಎಂದು ಹೇಳಿದರು. ಶಾಸಕ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಸ್ವಂತ ಖರ್ಚಿನಿಂದ 1 ಲಕ್ಷ ಡೋಸ್ ಲಸಿಕೆ ತರಿಸುತ್ತಿದ್ದಾರೆ. ಲಸಿಕೆಗಾಗಿ ಈಗಾಗಲೇ 6 ಕೋಟಿಯನ್ನು ಲಸಿಕೆ ನೀಡುವ ಸಂಸ್ಥೆಗೆ ಪಾವತಿಸಿದ್ದಾರೆ. ಈ ಕಾರ್ಯಕ್ಕಾಗಿ ಶಾಮನೂರು ಶಿವಶಂಕರಪ್ಪ ಅವರ ಸಂಸ್ಥೆಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಎಐಸಿಸಿ ಮುಖಂಡರಾದ ಸೋನಿಯಾ ಗಾಂಧಿ,ರಾಹುಲ್ ಗಾಂಧಿ,ಗುಲಾAನಬಿ ಆಜಾದ್ ಅವರೊಂದಿಗೆ ಮಾತನಾಡಿದ್ದೇವೆ ಇಂತಹ ಹೃದಯಶ್ರೀಮಂತಿಕೆಯ ಕೆಲಸ ಮಾಡಿ ಎಂದಿದ್ದಾರೆ. ಲಸಿಕೆಯನ್ನು ಯಾವುದೇ ಪಕ್ಷ ಜಾತಿ ಬೇಧವಿಲ್ಲದೇ ಎಲ್ಲರಿಗೂ ನೀಡಲಾಗುತ್ತಿದೆ. 18 ವರ್ಷದೊಳಗಿನವರಿಗೆ ಲಸಿಕೆ ನೀಡಲು ಮುಖ್ಯಮಂತ್ರಿಗಳು ಚಾಲನೆ ನೀಡಿದರು ಆದ್ದರಿಂದ ನಮ್ಮ ಎನ್ ಎಸ್ ಯುಐ,ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರ್ವಹಣೆಗೆ ಸೂಚನೆ ನೀಡಿದ್ದೆವು ಆದರೆ ಆನ್‌ಲೈನ್ ನೊಂದಣಿಯನ್ನು ಸರ್ಕಾರ ಸ್ಥಗಿತಗೊಳಿಸಿದೆ ಇದರ ಬಗ್ಗೆ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿದಾಗ ಸ್ಥಗಿತ ಗೊಳಿಸಲಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ ನವರು ಜೀವ ಹೊದರು ಜಗ್ಗುವುದಿಲ್ಲ ಜನರ ಜೀವಉಳಿಸುವ ಕೆಲಸ ಮಾಡುತ್ತೇವೆ ಎಂದರು. ಈ ವೇಳೆ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್,ಕಾಂಗ್ರೆಸ್ ಮುಖಂಡರಾದ ಸಲೀಂ ಅಹಮ್ಮದ್,ಈಶ್ವರ್ ಖಂಡ್ರೆ,ಶಾಸಕರುಗಳಾದ ಪಿ.ಟಿ ಪರಮೇಶ್ವರ ನಾಯ್ಕ್,ಎಸ್ ರಾಮಪ್ಪ, ಕೆ.ಸಿ ಕೊಂಡಯ್ಯ, ಹೆಚ್.ಬಿ ಮಂಜಪ್ಪ,ಡಿ.ಬಸವರಾಜ್ ಇತರರಿದ್ದರು.