ಶಾಮನೂರು ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ಎಸ್ ಎಸ್ ಎಂ; ಪ್ರಚಾರಕ್ಕೆ ಚಾಲನೆ

ದಾವಣಗೆರೆ.ಏ.೩; ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್ ಎಸ್ ಮಲ್ಲಿಕಾರ್ಜುನ ಅವರು ದಾವಣಗೆರೆ ಹೊರವಲಯದಲ್ಲಿರುವ ಶಾಮನೂರು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಈಶ್ವರ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಅದ್ದೂರಿಯಾಗಿ ತಮ್ಮ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.ಶಾಮನೂರು ಗ್ರಾಮದ ಹೆಬ್ಬಾಗಿಲಲ್ಲೇ ಎಸ್ಎಸ್ ಮಲ್ಲಿಕಾರ್ಜುನ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಮತದಾರರು ಅವರಿಗೆ ಬೃಹತ್ ಹಾರ ಹಾಕುವ ಮೂಲಕ ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಾಗತಿಸಿದರು.ಇದೆ ವೇಳೆ ತಮ್ಮ ತಮಗೆ ವೋಟ್ ನೀಡುವಂತೆ ಎಸ್.ಎಸ್. ಮಲ್ಲಿಕಾರ್ಜುನ ಮನವಿ ಮಾಡಿದರು. ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವಿವಿಧ ಘಟಕಗಳ ಮುಖಂಡರು. ಶಾಮನೂರು ಗ್ರಾಮಸ್ಥರು ಇದ್ದರು. ಮೆರವಣಿಗೆ ಶಾಮನೂರು ಗ್ರಾಮದಲ್ಲಿ ಸಂಚರಿಸಿ ಪ್ರತಿ ಮನೆಮನೆಗೆ ತರಳಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮಲ್ಲಿಕಾರ್ಜುನ್ ಹಾಗೂ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಎಲ್ಲರಲ್ಲೂ ಮನವಿ ಮಾಡಿದರು.