ಶಾನಕ ಎನ್.ಎಚ್ ಕೋನರಡ್ಡಿ ಅವರಿಗೆ ಮೆರವಣಿಗೆ, ಸನ್ಮಾನ


ಸಂಜೆವಾಣಿ ವಾರ್ತೆ
ಹುಬ್ಬಳ್ಳಿ, ಜೂ.09: ತಾಲೂಕಿನ ಕೋಳಿವಾಡ ಮತ್ತು ಮಲ್ಲಿಗವಾಡ ಗ್ರಾಮಗಳಲ್ಲಿ ನವಲಗುಂದ ಮತಕ್ಷೇತ್ರದ ನೂತನ ಶಾಸಕ ಎನ್.ಎಚ್ ಕೋನರಡ್ಡಿ ಅವರನ್ನು ಚಕ್ಕಡಿ ಮೂಲಕ ಮೆರವಣಿಗೆ ನಡೆಸಿ, ಗ್ರಾಮಸ್ಥರು ಅಭಿನಂದಿಸಿ, ಸನ್ಮಾನಿಸಿದರು
ಬಳಿಕ ಮಾತನಾಡಿದ ಶಾಸಕ ಎನ್.ಎಚ್ ಕೋನರಡ್ಡಿ ಅವರು ನವಲಗುಂದ ಮತಕ್ಷೇತ್ರದ ಶಾಸಕನಾಗಿ ಆಯ್ಕೆ ಮಾಡಿದಕ್ಕೆ ಗ್ರಾಮಸ್ಥರಿಗೆ ದನ್ಯವಾದ ಅರ್ಪಿಸಿದರು. ಮುಂಬರುವ ದಿನಗಳಲ್ಲಿ ಕೋಳಿವಾಡ, ಮಲ್ಲಿಗವಾಡ ಗ್ರಾಮಗಳು ಸೇರಿದಂತೆ ನವಲಗುಂದ ಮತಕ್ಷೇತ್ರದ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ನಡೆಸಲಾಗುವುದು. ನವಲಗುಂದ ಮತಕ್ಷೇತ್ರದ ಎಲ್ಲ ಗ್ರಾಮಗಳ ಜನರು ತಪ್ಪದೇ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಸಿ, ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೋಳಿವಾಡ, ಮಲ್ಲಿಗವಾಡ ಗ್ರಾಮಗಳ ಚಕ್ಕಡಿ ರಸ್ತೆ, ರಾಜ್ಯ ಹೆದ್ದಾರಿ, ಜಿಲ್ಲಾಮುಖ್ಯ ರಸ್ತೆಗಳನ್ನು ಎರಡು ತಿಂಗಳಯೊಳಗಾಗಿ ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ ಹೆಚ್ಚುವರಿ 9 ಬಸ್‍ಗಳನ್ನು ಕೋಳಿವಾಡ-ಮಲ್ಲಿಗವಾಡ ಗ್ರಾಮಕ್ಕೆ ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕೋಳಿವಾಡ, ಮಲ್ಲಿಗವಾಡ ಗ್ರಾ.ಪಂ ಅಧ್ಯಕ್ಷರು, ಸರ್ವ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.