ಶಾದಿ ಮೇಳಕ್ಕೆ ಶತಕಕ್ಕೂ ಹೆಚ್ಚು ಹಾಜರಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.18: ನಗರದ ಕೆ.ಸಿ.ರಸ್ತೆಯಲ್ಲಿನ ಜಾಸ್ಮಿನ್ ಮುಸ್ಲಿಂ ವಿವಾಹ ಮಾಹಿತಿ‌ ಕೇಂದ್ರದಲ್ಲಿ ನಿನ್ನೆ ನಡೆದ ಶಾದಿ ಮೇಳದಲ್ಲಿ ನೂರಕ್ಕೂ ಹೆಚ್ಚು ಜನತೆ ಹಾಜರಾಗಿ ವಿಷಯ ವಿನಮಯ ಮಾಡಿಕೊಂಡರು.
ಕೇಂದ್ರದ ಮುಖ್ಯಸ್ಥ ಬಿ.ಎಂ.ರಫಿ ಅವರ ನೇತೃತ್ವದಲ್ಲಿ ರಾಜ್ಯದ ಬೆಂಗಳೂರು, ಕಲ್ಬುರ್ಗಿ, ವಿಜಾಪುರ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನತೆ ಆಗಮಿಸಿದ್ದರು. ಈ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿತ್ತು.

Attachments area