ಶಾದಿಪೂರ ಸರ್ಕಾರಿ ಪ್ರೌಢ ಶಾಲೆಗೆ ತಾಪಂ ಅಧಿಕಾರಿ ಭೇಟಿ

ಚಿಂಚೋಳಿ,ಆ.11- ತಾಲೂಕಿನ ಶಾದಿಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ತಾಲೂಕ ಪಂಚಾಯತ ಕಾರ್ಯನಿರ್ವಕ ಅಧಿಕಾರಿಗಳಾದ ಶಂಕರ ರಾಠೋಡ, ಅವರು ಭೇಟಿ ನೀಡಿ “ಮೇರಿ ಮಿಟ್ಟಿ ಮೇರಾ ದೇಶ್” ಎಂಬ ಚಟುವಟಿಕೆಯ ಕಾರ್ಯಕ್ರಮದ ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸಿದರು.
ಇದೇ ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಅಮೃತ ಸರೋವರದ ತಾಣದಲ್ಲಿ ಶಾಲಾ ಮಕ್ಕಳಿಗೆ ಚಿತ್ರಕಲೆ, ಘೋಷಣೆ ಬರೆಯುವುದು, ರಂಗೋಲಿ ಹಾಕುವುದು, ಗ್ರಾಮೀಣ ಆಟಗಳಾದ ಖೋ ಖೋ, ಲಗೋರಿ, ಹಗ್ಗ ಜಗ್ಗಾಟ, ಹಗ್ಗ ಜಿಗಿತ, ಕುಂಟ ಓಟ, ಕುರ್ಚಿ ಓಟ ಇತ್ಯಾದಿಗಳನ್ನು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ಸದರಿ ಚಟುವಟಿಕೆಗಳ ತಯಾರಿಕೆಗಾಗಿ ತಗಲುವ ವೆಚ್ಚವನ್ನು ಗ್ರಾಮ ಪಂಚಾಯತಿ ವತಿಯಿಂದ ಭರಿಸಲಾಗುವುದು ಹಾಗಾಗಿ ಸದರಿ ಚಟುವಟಿಕೆಗಳ ಕುರಿತು ತಯಾರಿ ನಡೆಸಲು ಶಾಲಾ ಮುಖ್ಯ ಗುರುಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಬಿಸಿಯೂಟ ವ್ಯವಸ್ಥೆಯನ್ನು ಕೂಡ ಪರಿಶೀಲಿಸಿದರು ಮುಂದುವರೆದು ಸರ್ಕಾರದ ನಿರ್ದೇಶನದಂತೆ ದೇಶಕ್ಕಾಗಿ ಹುತಾತ್ಮರಾದ ಯೋಧರ ಗೌರವಾರ್ಥ ಅಮೃತ ಸರೋವರದ ಬಳಿ ಶಿಲಾಫಲಕವನ್ನು ಸ್ಥಾಪಿಸಲು ಸದರಿ ಶಿಲಾಫಲಕದಲ್ಲಿ ಗ್ರಾ.ಪಂ ಹೆಸರು, ಪ್ರಧಾನಮಂತ್ರಿಗಳ 2047ರ ಘೋಷ ವಾಕ್ಯ, ಮುಖ್ಯ ಮಂತ್ರಿಗಳ ಘೋಷ ವಾಕ್ಯ, ಬಸವಣ್ಣ ನವರ ವಚನ ಹಾಗೂ ಪಂಚಾಯತ ವ್ಯಾಪ್ತಿಯಲ್ಲಿನ ದೇಶಕ್ಕಾಗಿ ಮಡಿದ ವೀರ ಯೋಧರ ಹೆಸರುಗಳನ್ನು ಬರೆಸಬೇಕು ಎಂದು ಪಿಡಿಓ ರವರಿಗೆ ಸೂಚಿಸಿದರು ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಹಾಗೂ ಗ್ರಾಮ ಪಂಚಾಯತ ಅಧಿಕಾರಿಗಳು ಇದ್ದರು.