ಶಾಟ್ ಸರ್ಕಿಟ್ ದಿಂದ ಬೆಂಕಿ ಚಂದು ಪಾಟೀಲ ಭೇಟಿ

ಕಲಬುರಗಿ: ಡಿ.31:ವಾರ್ಡ್ 32 ರಲ್ಲಿ ಬರುವ ಸಾಯಿ ನಗರದ ನಿವಾಸಿ ಶಿವರಾಜ್ ಎಂಬುವರ್ ಮನೆಗೆ ಕರೆಂಟ್ ಶಾಟ್ ಸರ್ಕಿಟ್ ದಿಂದ ಬೆಂಕಿ ಹತ್ತಿ, ಹನಿಗೋಲಾಗಿದ್ದು ಗೊತ್ತಾಗಿ ಕ್ರೇಡಲ ಅಧ್ಯಕ್ಷ ಚಂದು ಪಾಟೀಲ ಅವರ ಮನೆಗೆ ಭೇಟಿ ಕೊಟ್ಟು, ಮನೆಗೆ ಹನಿಯಾಗಿದ್ದನ್ನು ವೀಕ್ಷಿಸಿ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಪರಿಶೀಲಿಸಿ, ಸೂಕ್ತ ಸಹಾಯ ವದಗಿಸಲು ನಿರ್ದೇಶನ ಕೊಟ್ಟರು.
ಮತ್ತು ಮನೆಯವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದಲ್ಲದೆ ತಮ್ಮ ವೈಯಕ್ತಿಕವಾಗಿ ಆರ್ಥಿಕ್ ಸಹಾಯ ಧನ ಮಾಡಿದರು.
ಈ ಸಂಧರ್ಭದಲ್ಲಿ ಪಾಲಿಕೆ ಸದಸ್ಯ ಶ್ರೀಮತಿ ಯಂಕಮ್ಮ.ಜೆ. ಗುತ್ತೇದಾರ, ಪಕ್ಷದ ಮುಖಂಡರಾದ ಜಗದೇವ ಗುತ್ತೇದಾರ, ಸಿದ್ದರಾಜ ಬಿರಾದಾರ್, ಜಗದೀಶ್ ಕೋರಿ, ಶಿವು ಕಾಳಗಿ, ಸುನೀಲ್ ಹಾಗೂ ಕಾಲೋನಿಯ್ ನಿವಾಸಿಗಳು ಉಪಸ್ಥಿತ ರಿದ್ದರು.