ಶಾಖವಾದಿ: ಗೈರಾಣಿ ಭೂಮಿ ಅತಿಕ್ರಮಣ ಸರಸ್ವತಿ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಯಚೂರು.ಏ.೦೨- ತಾಲೂಕಿನ ಶಾಖವಾದಿ ಗ್ರಾಮ ಸಿಮಾಂತರದ ಗೈರಾಣಿ ಸರ್ವೆ ನಂ: ೮೪, ವಿಸ್ತೀರ್ಣ ೩ ಎಕರೆ ೧೬ ಗುಂಟೆ ಜಮೀನಿನಲ್ಲಿ ಅನಧಿಕೃತ ದೌರ್ಜನ್ಯದಿಂದ ಅಂದಾಜು ೪ ರಿಂದ ೬ ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಪ್ಲಾಟ್ ನಿರ್ಮಿಸಿ ಮಾರಾಟ ಮಾಡುತ್ತಿರುವ ಸರಸ್ವತಿ ಗಂಡ ಮಲ್ಲೇಶ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜೈ ಕನ್ನಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಈ ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ಸದರಿ ಸರ್ವೇ ನಂ ನಲ್ಲಿ ಪರಿಶೀಲನೆ ಕೈಗೊಂಡು ಒತ್ತುವರಿ ಜಮೀನು ಕಂಡುಬಂದಲ್ಲಿ ತೆರವುಗೊಳಿಸಿ ಆ ಜಮೀನನ್ನು ಸರಕಾರ ವಶಕ್ಕೆ ಪಡೆದುಕೊಂಡು ತಂತಿ ಬೇಲಿ ಹಾಗೂ ನಾಮಫಲಕ ಹಾಕಿ ಹದ್ದುಬಸ್ತು ಮಾಡುವಂತೆ ಆಗ್ರಹಿಸಿದ್ದಾರೆ. ಶಾಖವಾದಿ ಗ್ರಾಮದ ಸಂಘಟನ ಕಾರ್ಯಕರ್ತ ಸರಕಾರಿ ಜಮೀನು ಒತ್ತುವರಿ ಮಾಡುತ್ತಿರುವ ಬಗ್ಗೆ ತಿಳಿದು ಸದರಿ ಜಾಗವನ್ನು ದೇಶಾಂಕ ಮ್ಯಾಪನಲ್ಲಿ ಒತ್ತುವರಿ ಕಂಡುಬಂದಿರುತ್ತದೆ ಎಂದು ದೂರಿದರು.ರಾಯಚೂರು ತಾಲೂಕಿನ ಚಂದ್ರಬಂಡಾ ಹೋಬಳಿ, ಶಾಖವಾದಿ ಗ್ರಾಮ ಸಿಮಾಂತರದಲ್ಲಿರುವಗ್ರಾಮ ಪಂಚಾಯತ ಕಛೇರಿ ಹತ್ತಿರದಲ್ಲಿರುವ ಕುಡಿಯು ವಾಟರ್ ಟ್ಯಾಂಕ್ ಹತ್ತಿರದಲ್ಲಿ ಇರುವ ಸರಕಾರಿ ಗೈರಾಣಿ ಸರ್ವೆ ನಂ: ೮೪/*/* ವಿಸ್ತೀರ್ಣ: ೦೩ ಎಕರೆ ೧೬ ಗುಂಟೆ ಜಮೀನು ಇದ್ದು, ಸದರಿ ಸರಕಾರಿ ಜಮೀನಿಗೆ ಹೊಂದಿಕೊಂಡಿರುವ ಸರ್ವೆನಂ: ೮೬/೧ ರ ಮಾಲಕಳಾದ ಶ್ರೀಮತಿ, ಸರಸ್ವತಿ ಗಂಡ: ಮಲ್ಲೇಶ ಈಕೆಯು ಅಂದಾಜು ೦೪ ರಿಂದ ೦೬ ಗುಂಟೆ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿ, ಮೊರಂನ್ನು ಹಾಕಿ, ದೌರ್ಜನ್ಯದಿಂದ ಪ್ಲಾಟನ್ನು ಸಿದ್ಧಪಡಿಸಿಕೊಂಡು, ಮಾರಾಟ ಮಾಡಲು ಹುನ್ನಾರ ಹೂಡಿದ್ದಾಳೆ ಈ ಕೂಡಲೇ ಅವರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಚಿನ್ನಯ್ಯಸ್ವಾಮಿ, ಪಟ್ಟದಕಲ್, ಹನುಮಂತ ಸೈಯದ್ ಪಾಷಾ, ಸೇರಿದಂತೆ ಉಪಸ್ಥಿತರಿದ್ದರು.