ಶಾಕ್ತಧರ್ಮ ಪ್ರಾಚೀನ ಧರ್ಮ

ಧಾರವಾಡ,ಏ22: ಶಾಕ್ತಪಂಥವುದೇವಿಯನ್ನು ಸರ್ವೋಚ್ಛಎಂದು ಗ್ರಹಿಸಿದೆ. ಆಕೆಯೇಜಗತ್ತಿನ ಸೃಷ್ಟಿಗೆ ಮೂಲ ಕಾರಣ.ಶಾಕ್ತಧರ್ಮವು ಪ್ರಾಚೀನಧರ್ಮವಾಗಿದೆಎಂದು ಬೆಂಗಳೂರಿನ ನಿವೃತ್ತಕನ್ನಡ ಪ್ರಾಧ್ಯಾಪಕರಾದಡಾ.ಶ್ಯಾಮಸುಂದರಕೋಚಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಆದ್ಯ ವಚನಕಾರದೇವರ ದಾಸಿಮಯ್ಯ ಜಯಂತ್ಯೋತ್ಸವದತ್ತಿ ಅಂಗವಾಗಿ ಆಯೋಜಿಸಿದ್ದ’ಶಾಕ್ತದಿಂದ ಶೈವದೆಡೆಗೆ-ದಾಸಿಮಯ್ಯ’ಉಪನ್ಯಾಸಕಾರ್ಯಕ್ರಮದಲ್ಲಿಅತಿಥಿಉಪನ್ಯಾಸಕರಾಗಿಅವರು ಮಾತನಾಡುತ್ತಿದ್ದರು.
ಬುಡಕಟ್ಟುಜನಾಂಗದವರು ಮೊದಲು ಶಕ್ತಿ ಆರಾಧಿಸುತ್ತಾ ಬಂದರು. ಅದೇ ಮುಂದೆ ಶಾಕ್ತಧರ್ಮವಾಯಿತು.ಶಾಕ್ತ ಪಂಥವು ಭಕ್ತಿಗಿಂತ ಸಾಧನೆ ಮುಖ್ಯಎಂದು ಪ್ರತಿಪಾದಿಸಿದೆ.ತಂತ್ರ ಹಾಗೂ ಯೋಗ ಮಾರ್ಗದಿಂದ ಶಕ್ತಿಯನ್ನು ಒಲಿಸಿಕೊಳ್ಳಲು ಸಾಧ್ಯಎಂದು ನಂಬಿದ್ದಾರೆ. ಮೂಲ ಶಾಕ್ತದಲ್ಲಿ ಹಿಂಸೆಗೆ ಅವಕಾಶವಿಲ್ಲ ಹಾಗೂ ಲೌಕಿಕ ಧರ್ಮವನ್ನು ಈ ಪಂಥತಿರಸ್ಕರಿಸುವುದಿಲ್ಲ ಎಂದರು.
ದತ್ತಿದಾನಿಗಳ ಪರವಾಗಿರಾಮಚಂದ್ರಗೆದ್ದೆಣ್ಣವರ ಮಾತನಾಡಿ, ಭಾರತದಲ್ಲಿ ಅನೇಕ ಜಾತಿ, ಧರ್ಮ, ಪಂಥಗಳಿದ್ದು ಅವು ತಮ್ಮದೇ ಸಿದ್ಧಾಂತವನ್ನು ಹೊಂದಿವೆ. ಅದರಂತೆಎಲ್ಲಾಧರ್ಮಕ್ಕೂ ಮೂಲವಾದ ಶಾಕ್ತ ಪಂಥವುತನ್ನದೇಆದ ಸಿದ್ಧಾಂತ ಹೊಂದಿದೆಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವಿ ಕನ್ನಡಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕರಾದಡಾ.ಜೆ. ಎಂ.ನಾಗಯ್ಯ ಮಾತನಾಡಿದರು.ಆದ್ಯವಚನಕಾರದೇವರ ದಾಸಿಮಯ್ಯನ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿಕ.ವಿ.ವ.ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ, ಹಿರಿಯಕೈಗಾರಿಕೋದ್ಯಮಿ ಮಹಾದೇವಕರಮರಿಇದ್ದರು.
ರೇಖಾ ಹೊಂಗಲ ಪ್ರಾರ್ಥಿಸಿದರು. ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು.ಡಾ. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಏಪ್ರೀಲ್ ತಿಂಗಳ ದತ್ತಿಕಾರ್ಯಕ್ರಮ ಸಂಯೋಜಕ ವೀರಣ್ಣಒಡ್ಡೀನ ನಿರೂಪಿಸಿದರು.ಮಹಾಂತೇಶ ನರೇಗಲ್ಲ ವಂದಿಸಿದರು.
ಕಾರ್ಯಕ್ರಮದಲ್ಲಿಡಾ.ಶೈಲಜಾಅಮರಶೆಟ್ಟಿ, ಗುರು ಹಿರೇಮಠ, ಪ್ರೊ.ಕೃಷ್ಣಮೂರ್ತಿ ಬೆಳಗೆರೆ ದಂಪತಿಗಳು, ಡಾ.ಶ್ಯಾಮಸುಂದರ ಬಿದರಕುಂದಿ, ಡಾ.ಪ್ರಕಾಶಗರುಡ, ಡಾ.ಈರಣ್ಣಇಂಜಗನೇರಿ, ಸುರೇಶ ಹಿರೇಮಠ ಸೇರಿದಂತೆಅನೇಕರು ಭಾಗವಹಿಸಿದ್ದರು.