ಶಾಂಫೈನಿಂದ ಬಂತು ಚಾಲಕರ ರಹಿತ ಮೆಟ್ರೊ

ಬೆಂಗಳೂರು,ಫೆ.೭-ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋಗೆ ಮೊದಲ ಚಾಲಕ ರಹಿತ ರೈಲು ಶಾಂಘೈನಿಂದ ಚೆನ್ನೈ ಬಂದರಿಗೆ ಬಂದು ತಲುಪಿದ್ದು,ಕಸ್ಟಮ್ಸ್ ಕ್ಲಿಯರೆನ್ಸ್ ನಂತರ, ರೈಲನ್ನು ರಸ್ತೆ ಮೂಲಕ ನಗರದಹೆಬ್ಬಗೋಡಿ ಡಿಪೋಗೆ ತರಲಾಗುತ್ತದೆ.
ಚೀನಾ-ಮಾಲೀಕತ್ವದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂ. ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟ ರೈಲಿನ ಆರು ಬೋಗಿಗಳನ್ನು ಟ್ರೇಲರ್‌ಗಳ ಮೂಲಕ ಸಾಗಿಸಲಾಗುತ್ತದೆ.
ರೈಲು, ಆರ್‌ವಿ ರಸ್ತೆ-ಬೊಮ್ಮಸಂದ್ರ ಲೈನ್‌ಗೆ ಪ್ರಾಯೋಗಿಕ ಸಂಚಾರ ನಡೆಸಲಿದೆ.
ಕಳೆದ ಜನವರಿ ೨೪ ರಂದು ಶಾಂಘೈ ಬಂದರಿನಿಂದ ಕಳುಹಿಸಲಾದ ಸಾಗಣೆಯು ನಿನ್ನೆ ಬೆಳಗ್ಗೆ ೧೧ ಗಂಟೆಗೆ ಜವಾಹರ್ ಡೆಕ್ -೨ನ್ನು ತಲುಪಿತು. ಇದು ಎಂವಿ ಸ್ಪ್ರಿಂಗ್ ಮೋಟಾ ಹಡಗಿನಲ್ಲಿ ಬಂದಿತು. ಪ್ರತಿ ಕೋಚ್ ೩೮.೭ ಮೆಟ್ರಿಕ್ ಟನ್ ತೂಗುತ್ತದೆ. ನೌಕೆಯು ಜನವರಿ ೨೪ ರಂದು ತನ್ನ ಪ್ರಯಾಣವನ್ನು ಪ್ರಾರಂಭಿಸಿ ಚೆನ್ನೈ ತಲುಪಲು ಎರಡು ವಾರಗಳನ್ನು ತೆಗೆದುಕೊಂಡಿದೆ.
ಟ್ರೇಲರ್‌ನಲ್ಲಿ ಸಾಗಾಣೆ:
ಇದನ್ನು ಯುನಿಟ್ರಾನ್ಸ್ ಶಿಪ್ಪಿಂಗ್ ಮತ್ತು ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ರವಾನೆ ಮಾಡಿದೆ. ಕಂಪನಿಯ ಪ್ರತಿನಿಧಿಯೊಬ್ಬರು, ನಾವು ಇಂದು ರಾತ್ರಿ ಮತ್ತು ನಾಳೆ ಕೋಚ್‌ಗಳನ್ನು ಬಿಡುಗಡೆ ಮಾಡುತ್ತೇವೆ. ಇಂದು ಮಧ್ಯಾಹ್ನ ೧೨ ಗಂಟೆಯೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕಸ್ಟಮ್ಸ್ ಕ್ಲಿಯರೆನ್ಸ್ ಒಂದು ದಿನ ತೆಗೆದುಕೊಳ್ಳುತ್ತದೆ. ನಾಳೆ ವೇಳೆಗೆ ಟ್ರೇಲರ್‌ಗಳ ಮೂಲಕ ಸಾಗಣೆಯು ಬೆಂಗಳೂರಿಗೆ ಹೊರಡಲಿದೆ ಎಂದು ತಿಳಿಸಿದ್ದಾರೆ.
ಫೆಬ್ರವರಿ ೨೦ ರೊಳಗೆ ಕೋಚ್‌ಗಳು ಬೆಂಗಳೂರಿನ ಡಿಪೋಗೆ ತಲುಪುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ ೨೦೧೯ ಚೀನಾದ ಕಂಪನಿ ೨೧೬ ಕೋಚ್‌ಗಳನ್ನು ಪೂರೈಸುವ ಒಪ್ಪಂದವನ್ನು ಪಡೆದುಕೊಂಡಿತು, ೧೭೩ ವಾರಗಳಲ್ಲಿ ಬಿಎಂಆರ್ ಸಿಎಲ್‌ಗೆ ತಲುಪಿಸುವ ನಿರೀಕ್ಷೆಯಿದೆ. ಇವುಗಳಲ್ಲಿ ೧೨೬ ಕೋಚ್‌ಗಳು (೨೧ ಆರು ಕೋಚ್ ರೈಲುಗಳು) ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಿಗೆ, ಉಳಿದ ೯೦ ಕೋಚ್‌ಗಳು (೧೫ ಆರು ಬೋಗಿಗಳ ರೈಲುಗಳು) ಹಳದಿ ಮಾರ್ಗದಲ್ಲಿ ಸಂಚರಿಸಲಿವೆ.
ಹಲವು ಪರೀಕ್ಷೆ:
ಈ ರೈಲು ನಗರಕ್ಕೆ ಬಂದ ನಂತರ, ರೈಲನ್ನು ಎಲೆಕ್ಟ್ರಾನಿಕ್ ಸಿಟಿ ಬಳಿಯ ಹೆಬ್ಬಗೋಡಿ ಡಿಪೋಗೆ ಕೊಂಡೊಯ್ಯ ಲಾಗುತ್ತದೆ, ಅಲ್ಲಿ ಚೀನಾದ ಎಂಜಿನಿಯರ್‌ಗಳ ಮೇಲ್ವಿಚಾರಣೆಯಲ್ಲಿ ಅದನ್ನು ಜೋಡಿಸಲಾಗುತ್ತದೆ.
ಇದರ ನಂತರ ೮-೧೦ ಸ್ಥಿರ ಪರೀಕ್ಷೆಗಳು, ಹಲವಾರು ಡೈನಾಮಿಕ್ ಪರೀಕ್ಷೆಗಳು, ೧೫ ಮುಖ್ಯ ಪರೀಕ್ಷೆಗಳು ಮತ್ತು ೭-೮ ಇಂಟರ್ಫೇಸ್ ಪರೀಕ್ಷೆಗಳು ಸೇರಿದಂತೆ ೩೨ ವಿಭಿನ್ನ ಪರೀಕ್ಷೆಗಳು ನಡೆಯುತ್ತವೆ. ರಿಸರ್ಚ್ ಡಿಸೈನ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗ ನೈಸೇಶನ್ (ಆರ್ ಡಿಎಸ್ ಒ) ನ ಮೇಲ್ವಿಚಾರಣೆಯಡಿಯಲ್ಲಿ ಮೇನ್‌ಲೈನ್ ನಲ್ಲಿನ ಪರೀಕ್ಷೆಗಳು ಆಂದೋಲನ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.
೬ ತಿಂಗಳು ಪ್ರಕ್ರಿಯೆ:
ಪರೀಕ್ಷಾ ಫಲಿತಾಂಶಗಳನ್ನು ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರಿಗೆ (ಸಿಸಿಆರ್‌ಎಸ್) ಸಲ್ಲಿಸಬೇಕು ಮತ್ತು ನಂತರ ತಾಂತ್ರಿಕ ಮಂಜೂರಾತಿಗಾಗಿ ರೈಲ್ವೆ ಮಂಡಳಿಗೆ ಸಲ್ಲಿಸಬೇಕಾಗುತ್ತದೆ,ಇಡೀ ಪ್ರಕ್ರಿಯೆಯು ಐದರಿಂದ ಆರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.”
ಪ್ರತಿ ೯೦ ಸೆಕೆಂಡ್‌ಗೊಂದು ರೈಲು:
ಚೈನೀಸ್ ನಿರ್ಮಿತ ರೈಲನ್ನು ೯೦ ಸೆಕೆಂಡುಗಳ ಆವರ್ತನದಲ್ಲಿ ಚಾಲಕ ರಹಿತವಾಗಿ ಓಡಿಸಬಹುದು. ಕೋಚ್ ೨೧ ಮೀಟರ್ ಉದ್ದ ಮತ್ತು ೩೨ ರಿಂದ ೩೭ ಟನ್ ತೂಗುತ್ತದೆ.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ ಮಹೇಶ್ವರ್ ರಾವ್ ಮಾತನಾಡಿ, ಸಿಆರ್‌ಆರ್‌ಸಿಯಿಂದ ಐವರು ಎಂಜಿನಿಯರ್‌ಗಳು ರೈಲು ಪರೀಕ್ಷೆ ನಡೆಸಲು ಬೆಂಗಳೂರಿಗೆ ಆಗಮಿಸಲಿದರೆ, ಉಳಿದವರು ತಿಟಾಘರ್‌ಗೆ ಹೋಗುತ್ತಾರೆ. ಇನ್ನೆರಡು ಚಾಲಕ ರಹಿತ ರೈಲುಗಳು ಅಲ್ಲಿ ಜೋಡಣೆಯಾಗುತ್ತಿವೆ.
ಹಳದಿ ಮಾರ್ಗವು ಸಂಪೂರ್ಣವಾಗಿ ಸಿದ್ಧವಾಗಿದೆ. ಆದರೆ ಕಾರ್ಯಾ ಚರಣೆಗಳನ್ನು ಈ ನಿರ್ದಿಷ್ಟ ರೈಲುಗಳ ಅಗತ್ಯವಿದೆ. ಮಾರ್ಚ್ ಆರಂಭದಲ್ಲಿ ಪ್ರಾಯೋಗಿಕ ಓಡಾಟ ಆರಂಭವಾಗಲಿದೆ.