ಶಾಂತ ರೀತಿಯಲ್ಲಿ ಹೋಳಿ ಆಚರಿಸಿ

ಸಿರವಾರ,ಮಾ.ಂ೫- ರಂಗು ರಂಗಿನ ಹಬ್ಬವಾದ ಹೋಳಿ ಹಬ್ಬವನ್ನು ಎಲ್ಲಾರೂ ಶಾಂತ ಸೌಹಾರ್ದತೆಯಿಂದ ಆಚರಣೆ ಮಾಡಬೇಕು ಎಂದು ಸಿರವಾರ ಪೊಲೀಸ್ ಠಾಣೆಯ ಪಿಎಸ್‌ಐ ಅವಿನಾಶ ಕಾಂಬ್ಳೆ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಸಂಜೆ ಛತ್ರಪತಿ ಶಿವಾಜಿ ಭಾವಚಿತ್ರ ಮೆರವಣಿಗೆ ಹಾಗೂ ಹೋಳಿ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಿರವಾರದಲ್ಲಿ ಯುಗಾದಿ ಹಬ್ಬಕ್ಕೆ ಬಣ್ಣದೊಕುಳಿ ಆಚರಣೆ ಮಾಡುತ್ತಾರೆಂಬ ಮಾಹಿತಿ ಇದೇ. ಮಾರ್ವಾಡಿಗಳು ಆಡುತ್ತಾರೆ. ಅವರಿಗೆ ಸೂಕ್ತ ನಿರ್ದೇಶನ ನೀಡಲಾಗುವುದು. ಭಾನುವಾರ ಛತ್ರಪತಿ ಶಿವಾಜಿ ಜಯಂತಿ ಭಾವಚಿತ್ರ ಮೆರವಣಿಗೆಯನ್ನು ಮಾಡಲು ಕೇಳಿದ್ದಾರೆ.
ಇತರರಿಗೆ ತೊಂದರೆಯಾಗದಂತೆ ಆಚರಣೆ ಮಾಡಬೇಕು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೆಕು. ಇಂದು ವೇಳೆ ಶಾಂತಿ ಕದಡಿದರೆ ಕ್ರಮಕೈಗೊಳಲಾಗುವುದು. ಮಕ್ಕಳಿಗೆ ಬೈಕ್ ನೀಡುವಾಗ ರಸ್ತೆ ನಿಯಮ ಪಾಲಿಸಬೇಕು. ನಿಮ್ಮ ಸುತ್ತಮುತ್ತ ಕಾನೂನು ಬಾಹಿರ ಚಟುವಟಿಕೆ ಕಂಡು ಬಂದರೆ ತಿಳಿಸಿ ಎಂದರು.
ಪ.ಪಂಚಾಯತಿ ಸದಸ್ಯ ಹಸೆನ್ ಅಲಿ, ಸಾಬ್, ಮೌಲಾಸಾಬ ವರ್ಚಸ್, ಅರಳಪ್ಪ ಯದಲದಿನ್ನಿ, ಎಂ.ಡಿ.ವಲಿ,ಸತ್ತರಸಾಬ್, ನಾಗರಾಜ, ಇಸ್ಮಾಯಿಲ್ ಸಾರ್ವಜನಿಕರು ಸಿಬ್ಬಂದಿ ವರ್ಗದವರು ಇದ್ದರು.