ಶಾಂತ ಕವಿಗಳು ಕನ್ನಡದ ಅಸ್ಮಿತೆ ಕಾಪಾಡಿದರು


ಧಾರವಾಡ,ಮಾ.16: ಶಾಂತ ಕವಿಗಳನ್ನು ಆಧುನಿಕಕರ್ನಾಟಕ ನಾಟಕ ಪಿತಾಮಹಎಂದುಕರೆಯಲಾಗಿದೆ. ಆಧುನಿಕರಂಗಭೂಮಿಗೆಇವರಕೊಡುಗೆಅನನ್ಯಎಂದು ನಿವೃತ್ತ ಪ್ರಾದ್ಯಾಪಕಡಾ. ವಿನಾಯಕ ನಾಯಕ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಸಕ್ಕರಿ ಬಾಳಾಚಾರ್ಯ ಶಾಂತಕವಿ'ಗಳ ಸ್ಮರಣೆಕಾರ್ಯಕ್ರಮದಲ್ಲಿಅತಿಥಿಉಪನ್ಯಾಸ ನೀಡುತ್ತಾ, 19 ನೇ ಶತಮಾನದ ಆದಿಭಾಗದಲ್ಲಿಉತ್ತರಕರ್ನಾಟಕದಧಾರವಾಡ ಹಾಗೂ ಬೆಳಗಾವಿ ಪ್ರದೇಶದಲ್ಲಿ ಮರಾಠಿ ಪ್ರಾಭಲ್ಯದಿಂದಕನ್ನಡಿಗರುಅನಾಥ ಪ್ರಜ್ಞೆಯಿಂದ ಬಳಲುತ್ತಿದ್ದಾಗ, ಸಕ್ಕರಿ ಬಾಳಾಚಾರ್ಯರು ಕನ್ನಡಿಗರಲ್ಲಿಕನ್ನಡ ಭಾಷೆ, ಸಂಸ್ಕøತಿ, ಸಾಹಿತ್ಯದ ಬಗ್ಗೆ ಜಾಗೃತಿಅಭಿಮಾನ ಮೂಡಿಸಿದರು. ಶಾಂತಕವಿಗಳು ಸುಮಾರು 30 ಕ್ಕೂ ಹೆಚ್ಚು ಕನ್ನಡ ನಾಟಕಗಳನ್ನು ಬರೆದು ಕಲಿಸಿ ರಂಗದ ಮೇಲೆ ಪ್ರಯೋಗಿಸಿದರು.ಕನ್ನಡದಲ್ಲಿ ಕೀರ್ತನೆಗಳೇ ಇಲ್ಲಎನ್ನುವಕಾಲದಲ್ಲಿಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿದರು. ಶಾಂತಕವಿಗಳು ಒಂದುದೃಷ್ಟಿಯಿಂದಕನ್ನಡರಂಗಭೂಮಿಗೆ ಮರುಜೀವ ನೀಡಿದವರಾಗಿದ್ದಾರೆ.ಕನ್ನಡದಲ್ಲಿಏನಿದೆ ?ಎನ್ನುವವರಿಗೆಕನ್ನಡದಲ್ಲಿಎಲ್ಲವೂಇದೆಎಂದು ತೋರಿಸಿಕೊಟ್ಟು ಕನ್ನಡದ ಅಸ್ಮಿತೆಯನ್ನು ಕಾಪಾಡಿದರು.ಆದರೆಅವರ ಬದುಕು, ಬರಹಕುರಿತುಆಗಬೇಕಾದಷ್ಟು ಸಂಶೋಧನೆ ನಡೆಯದಿರುವುದು ವಿಷಾದನೀಯಎಂದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಮರ್ಶಕ, ಸಾಹಿತಿಡಾ.ಶಾಮಸುಂದರ ಬಿದರಕುಂದಿ ಮಾತನಾಡಿ, ಕನ್ನಡ ಭಾಷೆ ಹಾಗೂ ಸಂಸ್ಕøತಿ ಬಗ್ಗೆ ಅಭಿಮಾನ ಮೂಡಿಸುವಲ್ಲಿಡೆಪ್ಯೂಟಿಚೆನ್ನಬಸಪ್ಪ ಹಾಗೂ ಶಾಂತಕವಿಗಳ ಪಾತ್ರಅಪಾರವಾದದ್ದು.ಶಾಂತಕವಿಗಳು ರಚಿಸಿದ ಮೊದಲ ನಾಟಕಉಷಾಹರಣ’ ಹಾಗೂ ಸೀತಾಅರಣ್ಯ ಪ್ರವೇಶ'ಗಳು ಅವರಿಗೆ ಹೆಚ್ಚಿನಜನಮನ್ನಣೆಯನ್ನುತಂದುಕೊಟ್ಟವು.ಕನ್ನಡ ಸಾಹಿತ್ಯ ಉಳಿಯಬೇಕಾದರೆ ಓದುಗರ ಸಂಖ್ಯೆ ಹೆಚ್ಚಾಗಬೇಕು.ಸ್ವಕೀಯತೆ ಉಳಿಸಿಕೊಂಡು, ಪರಕೀಯತೆಯನ್ನು ನಾವು ತ್ಯಜಿಸಬೇಕೆಂದರು. ಸಕ್ಕರಿ ಬಾಳಾಚಾರ್ಯರ 104 ನೇ ಪುಣ್ಯತಿಥಿಯ ನಿಮಿತ್ತಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘವು ಶಾಂತಕವಿಗಳ ಹೆಸರಿನಲ್ಲಿ ನಡೆಸುತ್ತಿರುವಶಾಂತೇಶ ವಾಚನಾಲಯಕ್ಕೆ’ ಸಕ್ಕರಿ ಬಾಳಾಚಾರ್ಯ `ಶಾಂತಕವಿ’ ಟ್ರಸ್ಟ್ (ರಿ) ವತಿಯಿಂದ 95 ಸಾವಿರ ರೂಗಳ ಕಬ್ಬಿಣದ 5 ಹೊಸ ಕಪಾಟುಗಳನ್ನು ದೇಣಿಗೆಯಾಗಿ ನೀಡಿದರು.ಸಂಘವು ಕೃತಜ್ಞತಾಭಾವದಿಂದ ಸ್ವೀಕರಿಸಿತು.
ಪ್ರಾರಂಭದಲ್ಲಿ ಪ್ರಸಾದ ಸುಧಾಕರ ಪ್ರಭು ಹಾಗೂ ಸಂಗಡಿರು ಸಕ್ಕರಿ ಬಾಳಾಚಾರ್ಯರ ರಂಗ-ಗೀತೆಗಳನ್ನು ಪ್ರಸ್ತುತಪಡಿಸಿದರು.
ವೇದಿಕೆಯಲ್ಲಿ ಕ.ವಿ.ವ.ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಹಾಗೂ ಬಾಬುರಾವ ಸಕ್ರಿಇದ್ದರು.
ಸಂಘದಕೋಶಾಧ್ಯಕ್ಷ ಸತೀಶತುರಮರಿ ಸ್ವಾಗತಿಸಿದರು.ಸಹಕಾರ್ಯದರ್ಶಿ ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣಒಡ್ಡೀನ ನಿರೂಪಿಸಿದರು.ಎಸ್.ಎಂ.ರಾಚಯ್ಯನವರ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಮಾಲತಿ ಪಟ್ಟಣಶೆಟ್ಟಿ, ನಿಂಗಣ್ಣಕುಂಟಿ, ರಮೇಶ ನಾಡಗೀರ, ಬಸವರಾಜ ಬೆಂಗೇರಿ, ಹನುಮೇಶ ಸಕ್ರಿ, ವಿ.ಎಚ್.ಡುಮ್ಮೇರ, ಪ್ರೊ.ಅರವಿಂದಕುಲಕರ್ಣಿ, ಉಳ್ಳಿಕಾಶಿ, ಸೇರಿದಂತೆ ಸೇರಿದಂತೆಅನೇಕರು ಭಾಗವಹಿಸಿದ್ದರು.