
ಹರಿಹರ ಮಾ 6 : ಕಾನೂನು ಸುವ್ಯವಸ್ಥೆ ಧಕ್ಕೆ ಬರದ ಹಾಗೆ ಶಾಂತಿ ಸೌಹಾರ್ದತೆ ಸಹ ಬಾಳ್ವೆಯಿಂದ ಹೋಳಿ ಹಬ್ಬವನ್ನು ಆಚರಿಸಬೇಕೆಂದು ಹರಿಹರ ನಗರದ ಇನ್ಸ್ಪೆಕ್ಟರ್ ದೇವಾನಂದ ಎಸ್ ಟಿ ಹೇಳಿದರುನಗರ ಠಾಣೆಯಲ್ಲಿ ಕರೆದಿದ್ದ ಶಾಂತಿ ಸೌಹಾರ್ತೆ ಸಭೆಯಲ್ಲಿ ಮಾತನಾಡಿದವರು ಮಾ 7ರಂದು ರಾತ್ರಿ 10 ಗಂಟೆಗೆ ಕಾಮದಾನ ಮಾಡುವುದು ಮಾ 8ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ಹೋಳಿ ಹಬ್ಬವನ್ನು ಆಚರಣೆ ಮಾಡುವುದು ಹೋಳಿ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಿ ಹಬ್ಬದ ಮಹತ್ವವನ್ನು ಅರ್ಥೈಸಿಕೊಂಡು ಆಚರಣೆ ಮಾಡಬೇಕು ಬಣ್ಣ ಎರಚುವ ಸಂದರ್ಭದಲ್ಲಿ ದೇಹಕ್ಕೆ ಹಾನಿಕಾರವಾದ ರಾಸಾಯನಿಕ ಬಣ್ಣಗಳನ್ನು ಬಳಸಬಾರದು ಸೌಹಾರ್ದತೆ ಕಾಪಾಡುವ ಉದ್ದೇಶ ನಮ್ಮದಾಗಬೇಕು. ಹಬ್ಬವನ್ನು ಸಂಭ್ರಮದಿಂದ ಯಾರಿಗೂ ಸಮಸ್ಯೆಯಾಗದಂತೆ ಹೋಳಿ ಹಬ್ಬ ಆಚರಿಸಬೇಕು. ಏನಾದರು ಸಮಸ್ಯೆಯಾದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಎಲ್ಲದಕ್ಕು ಇಲಾಖೆ ನಿಮ್ಮ ಜೊತೆಗೆ ಇರಲಿದೆಹಬ್ಬದ ಆಚರಣೆ ಎಲ್ಲರ ಹಕ್ಕು. ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಹಬ್ಬವೂ ನಡೆಯಬೇಕಿದೆ. ತಾಳ್ಮೆಯಿಂದ ಎಲ್ಲರು ಎಲ್ಲರಿಗೂ ಸಹಕರಿಸಿದ್ದಲ್ಲಿ ಉತ್ತಮ ವಾತಾವರಣ ಇರಲಿದೆ. ಆಸಕ್ತರಿಗೆ ಹೋಳಿ ಹಬ್ಬದಲ್ಲಿ ಪಾಲ್ಗೊಂಡು ಆಚರಿಸಿ ಇಲ್ಲವಾದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಬೇಡಿ ಎಂದರು.