ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಆಚರಿಸಿ  :  ಡಿ ವೈ ಎಸ್.ಪಿ ಚೈತ್ರ

 ಹಿರಿಯೂರು.ಜೂ.25- ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಹಬ್ಬವನ್ನು ಆಚರಿಸುವಂತೆ ಡಿವೈಎಸ್ಪಿ ಪಿ ಚೈತ್ರ ಹೇಳಿದರು. ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯ ಆವರಣದಲ್ಲಿ ಕರೆದಿದ್ದ ಬಕ್ರೀದ್ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮಗಳನ್ನು ಸಂತಸ ಮತ್ತು ಸಾಮರಸ್ಯ ದಿಂದ ಆಚರಿಸಬೇಕು ಎಂದರು.ಇನ್ಸ್ ಪೆಕ್ಟರ್ ಕಾಳಿಕೃಷ್ಣ ಮಾತನಾಡಿ ಮೆರವಣಿಗೆ ಪ್ರಾರ್ಥನೆ ಶಾಂತಿ ಸೌಹಾರ್ದತೆಯಿಂದ ನಡೆಸಬೇಕು ಅನಾವಶ್ಯಕ ಘಟನೆಗಳಿಗೆ ಎಡೆ ಮಾಡಿಕೊಡುವುದು ಬೇಡ  ಎಂದು ಹೇಳಿದರು. ಸಭೆಯಲ್ಲಿ   ಮುಖಂಡರಾದ ಕೇಶವಮೂರ್ತಿ,  ಜಿಎಲ್.ಮೂರ್ತಿ ಮತ್ತಿತರರು ಮಾತನಾಡಿದರು.ಪಿಎಸ್ಐ ರವರಾದ  ಮಂಜುನಾಥ್, ಲಕ್ಷ್ಮೀನಾರಾಯಣ್, ನೇತ್ರಾವತಿ, ಸಚಿನ್, ಆರೋಗ್ಯ ನಿರೀಕ್ಷಕ ಅಶೋಕ್, ಮುಖಂಡರಾದ ವಿಠ್ಠಲ್ ಪಾಂಡುರಂಗ, ಜಬಿವುಲ್ಲಾ, ಶರೀಫ್, ಚಂದ್ರಪ್ಪ ಮತ್ತಿತರರು ಪಾಲ್ಗೊಂಡಿದ್ದರು.