ಶಾಂತಿ-ಸೌಹಾರ್ದತೆಗೆ ಎಲ್ಲರೂ ಮುಂದಾಗಿ : ಡಾ. ಖಾಜಿ

ತಾಳಿಕೋಟೆ:ಎ.23: ರಮಜಾನ್ ಹಬ್ಬದ ಪ್ರಯುಕ್ತ ಇಲ್ಲಿನ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲೀಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ನಂತರ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.

     ಈ ಸಂದರ್ಭದಲ್ಲಿ ಈದ ಪ್ರವಚನ ನೀಡಿದ ಡಾ|| ಮಿನ್‍ಹಾಜುದ್ದೀನ ಖಾಜಿ ಅವರು ನಮ್ಮೆಲ್ಲರ ಸೃಷ್ಠಿಕರ್ತ ಒಬ್ಬನೇ ಆಗಿದ್ದಾನೆ. ನಾವೆಲ್ಲರೂ ಅವನ ಆಜ್ಞೆಗಳಿಗೆ ಶರಣಾಗಿ ಬಾಳಬೇಕಾಗಿದೆ. ಅವನ ದೃಷ್ಠಿಯಲ್ಲಿ ನಾವೆಲ್ಲರೂ ಸಮಾನರಾಗಿದ್ದೇವೆ. ನಮ್ಮ ಪೈಕಿ ಪ್ರತಿಯೊಬ್ಬರೂ ಸತ್ಯ ಹಾಗೂ ಪ್ರಾಮಾಣಿಕತೆಯ ಗುಣವನ್ನು ಬೆಳಸಿಕೊಳ್ಳಬೇಕು. ಪ್ರವಾದಿ ಮಹಮ್ಮದರ ಆದರ್ಶಗಳನ್ನು ಅನುದಿನವೂ ಪಾಲಿಸಬೇಕು. ಪರೋಪಕಾರ ಮಾನವೀಯ ಅನುಕಂಪದಂಥಹ ಉದಾತ್ತಗುಣಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿರುವ ಬಡ ಹಾಗೂ ನಿರ್ಗತಿಕರಿಗೆ ನೆರವಾಗಬೇಕು. ಸಮಾಜದಲ್ಲಿರುವ ಎಲ್ಲ ಧರ್ಮೀಯರೊಂದಿಗೂ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಶಾಂತಿ ಸಾಮರಸ್ಯದಿಂದ ಜೀವನ ನಡೆಸಬೇಕು ಎಂದರು. ಶಿಕ್ಷಣದಿಂದ ಮಾತ್ರ ಸಮಾಜದ ಸರ್ವಾಂಗೀಣ ಪ್ರಗತಿ ಸಾಧ್ಯ, ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಶಿಕ್ಷಣವಂಥರಾಗಿ ಮಾಡಲು ಪ್ರಯತ್ನಿಸಬೇಕು. ಇವರಿಂದ ಸಮಾಜದ ಅಭಿವೃದ್ಧಿ ಆಗುವದರೊಂದಿಗೆ ದೇಶಕ್ಕೆ ಸತ್ಪ್ರಜೆಯನ್ನು ನೀಡಿದಂತಾಗುತ್ತದೆ. ರಮಜಾನ್ ಮಾಸದಲ್ಲಿ ಉಪವಾಸಗಳ ಮೂಲಕ ಪಡೆದುಕೊಂಡ ಶಾಂತಿ, ಸಹನೆಯಂಥಹ ಉದಾತ್ತ ಗುಣಗಳನ್ನು ಜೀವನ ಪೂರ್ತಿ ಅನುಸರಿಸುವಂತಾಗಬೇಕೆಂದು ತಿಳಿಸಿದರು.
     ಈ ಸಮಯದಲ್ಲಿ ಈದ್ಗಾ ಸಮಿತಿ ಅಧ್ಯಕ್ಷ ಮಾಸೂಮ್‍ಸಾಬ ಕೆಂಭಾವಿ, ಉಪಾಧ್ಯಕ್ಷ ಅಬ್ದುಲ್‍ರಜಾಕ್ ಮನಗೂಳಿ, ಕಾರ್ಯದರ್ಶಿ ಎ.ಡಿ. ಎಕೀನ, ಜಾಮೀಯಾ ಮಸೀದಿ ಅಧ್ಯಕ್ಷ ಅಲ್ಲಾಬಕ್ಷ ನಮಾಜಕಟ್ಟಿ, ಪುರಸಭೆ ಉಪಾಧ್ಯಕ್ಷ ಮುಸ್ತಫಾ ಚೌದ್ರಿ, ಗಣ್ಯರಾದ ಖಾಜಾಹುಸೇನ ಡೋಣಿ, ಗನಿಸಾಬ ಲಾಹೋರಿ, ಫಸಿಯುದ್ದೀನ ಖಾಜಿ, ಸೈಯದ್ ಶಕೀಲಅಹ್ಮದ್ ಖಾಜಿ, ಇಬ್ರಾಹಿಂ ಮನ್ಸೂರ, ಡಾ|| ಎ.ಎ. ನಾಲಬಂದ, ಕೆ.ಆಯ್. ಸಗರ, ಎಂ.ಕೆ.ಚೋರಗಸ್ತಿ, ಮಹೆಬೂಬ ಲಾಹೋರಿ, ಬೀಜಾನಲಿ ನೀರಲಗಿ, ನಿರಂಜನಶಾ ಮಕಾನದಾರ, ಸನಾ ಕೆಂಭಾವಿ, ರಾಜಅಹ್ಮದ್ ಒಂಟಿ, ಸಿಕಂದರ ವಠಾರ, ಅಬ್ದುಲ್‍ಸತ್ತಾರ ಅವಟಿ, ಎ.ಎಸ್. ನಮಾಜಕಟ್ಟಿ, ಹಸನ್‍ಸಾಬ ಮನಗೂಳಿ, ಫಯಾಜುದ್ದೀನ ಖಾಜಿ, ಮಹೆಬೂಬಶ್ಯಾ ಮಕಾನದಾರ, ಮಂಜೂರಲಿ ಬೇಪಾರಿ, ಆರೀಫ ಹೊನ್ನುಟಗಿ, ಮುಜಾಹಿದ್ ನಮಾಜಕಟ್ಟಿ ಇದ್ದರು.