ಶಾಂತಿ ಸುವ್ಯವಸ್ಥೆಯಿಂದ ಪಲ್ಲಕ್ಕಿ ಉತ್ಸವ ನಿಯಮ ಪಾಲನೆ ಕಡ್ಡಾಯ : ಹೀರೆಮಠ

(ಸಂಜೆವಾಣಿ ವಾರ್ತೆ)
ಶಹಾಪುರ:ಜ.10:ಸಗರ ನಾಡಿನ ಆರಾಧ್ಯ ದೈವರಾದ ದಿಗ್ಗಿಯ ಶ್ರೀ ಸಮಗಮೇಶ್ವರವರ ಮತ್ತು ಭೀಮರಾಯನಗುಡಿಯ ಶ್ರೀ ಬಲಭೀಮೇಶ್ವರ ಪಲ್ಲಕ್ಕಿ ಉತ್ಸವಗಳು ಮಕರ ಸಂಕ್ರಾಂತಿ ಹಬ್ಬವನ್ನು ಸರ್ಕಾರದ ಮಾರ್ಗಸೂಚಿಯಂತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಪಲ್ಲಕಿ ಉತ್ಸವವಗಳನ್ನು ನೇರವೇರಿಸಬೇಕು. ಪ್ರತಿಯೊಬ್ಬರು ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಹಾಪುರ ನಗರ ಸಿ.ಪಿ.ಐ ಚೆನ್ನಯ್ಯ ಹೀರೆಮಠರವರು ಹೇಳಿದರು.
ನಗರದ ಪೋಲಿಸ್ ಠಾಣೆಯಲ್ಲಿ ಮುಂದಿನ ಮಕರ ಸಂಕ್ರಾಂತಿ ನಿಮಿತ್ಯ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊವಿಡ್ ಪರಿಸ್ಥಿತಿಯಲ್ಲಿ ಹಬ್ಬ, ಸಮಾರಂಭಗಳನ್ನು ಕ್ರಮಬದ್ದವಾಗಿ ಮಾಡಿಕೊಂಡು ಬರಲಾಗುತ್ತಿದ್ದು ಅದರಂತೆ ಮಕರ ಸಂಕ್ರಾಂತಿ ಹಬ್ಬ ಸರ್ವರಿಗೂ ಮಾದರಿಯಾಗಬೇಕು ಮತ್ತು ಮುಂದಿನ ಧಾರ್ಮಿಕ ಕಾರ್ಯಕ್ರಮಗಳಿಗೆ ಇದು ಅಡಿಪಾಯವಿದ್ದಂತೆ, ಪೋಲಿಸ್ ಇಲಾಖೆ ಸಿಬ್ಬಂದಿಯವರೊಂದಿಗೆ ಪರಸ್ಪರ ಸಹಕಾರ ನೀಡಿ ಮಕರ ಸಂಕ್ರಾಂತಿ ಹಬ್ಬವನ್ನು ಸರಳ ಮತ್ತು ವಿನಮ್ರತೆಗಳಿಂದ ಆಚರಣೆಗೊಳ್ಳಬೇಕು. ಯಾವುದೆ ಬ್ಯಾನರ್, ಕಟೌಟ್, ದ್ವಜ ಹಾಕಕೂಡದು. ಅಲ್ಲದೆ ಯಾವುದೆ ಧರ್ಮ, ಸಮಾಜ ಶಾಂತಿಗೆ ದಕ್ಕೆ ಬಾರದಂತೆ ಆಯಾ ದೇವಸ್ಥಾನದ ಮೇಲ್ವಿಚಾಕರು, ಮುಖಂಡರು ನೇತೃತ್ವ ವಹಿಸಿಕೊಳ್ಳಬೇಕು ಎಂದು ಅವರು ವಿವರಿಸಿದರು.
ಶಹಾಪುರ ತಾಲೂಕಿನ ಬಲಭೀಮೇಶ್ವರ ಮತ್ತು ದಿಗ್ಗಿ ಸಂಗಮೇಶ್ವರವರ ಜೋಡು ಪಲ್ಲಕ್ಕಿಗಳು ಹುರಸಗುಂಡಗಿಯ ಭೀಮಾನದಿಯಲ್ಲಿ 14ರಂದು ಗಂಗಾಸ್ನಾನ ಮಾಡಿಕೊಂಡು ಅಂದು ಮಡ್ನಾಳ ಮುಖಾಂತರ ಹಳಿಸಗರ ಪ್ರವೇಶಮಾಡಲಾಗುತ್ತದೆ. ಈ ಏರಡು ದೇವರುಗಳ ಪಲ್ಲಕ್ಕಿ ಉತ್ಸವವಗಳು ಸಂಜೆ ಶಹಾಪುರ ನಗರದ್ಯಾಂತ ಮಾರುತಿ ರಸ್ತೆ, ಮೊಚಿಗಡ್ಡಾ, ದಿಗ್ಗಿ ಅಗಸಿಯವರೆಗೆ ಮೆರವಣಿಗೆ ನೆಡೆಯುತ್ತಿದೆ. ಅಂದು ಪ್ರತಿ ಪಲ್ಲಕ್ಕಿ ಉತ್ಸವದ ಭಕ್ತರು ಹೆಚ್ಚು ಕಾಳಜಿ ವಹಿಸಿಬೇಕು. ಭಕ್ತರು ನೈವೈಧ್ಯಗಳನ್ನು ನೀಡುವಾಗ ಸರದಿಯಲ್ಲಿ ಕ್ರಮಬದ್ದತೆಗಳಿಂದ ನೀತಿ ನೀಯಮಗಳೊಂದಿಗೆ ಸಮರ್ಪಣೆ ಮಾಡಬೇಕು ಎಂದು ಅವರು ತಿಳಿಸಿದರು.
ನಂತರ ಶ್ರೀ ಬಲಭೀಮೇಶ್ವರರ ದೇವಸ್ಥಾನದ ಪ್ರಮುಖರಾದ ಸಣ್ಣ ನಿಂಗಣ್ಣ ನಾಯ್ಕೊಡಿ ಮಾತನಾಡಿ, ಬರುವ ಸಕಲ ಭಕ್ತರಿಗೆ ಯಾವುದೆ ತೊಂದರೆಯಾಗದಂತೆ ಮುಂಜಾಗ್ರತಾವಾಗಿ ದೇವಸ್ಥಾನದ ಸ್ವಯಂಸೇವಕರ ತಂಡ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಮಕರ ಸಂಕ್ರಾಂತಿ ಹಬ್ಬ ಶಾಂತಿ ಕಾಪಾಡಿಕೊಂಡು ಆಚರಣೆ ಮಾಡಲು ಸರ್ವರ ಸಹಕಾರ ನೀಡಬೇಕು. ಸರ್ಕಾರದ ನೀತಿಗಳನ್ನು ಪಾಲಿಸಿಕೊಳ್ಳಬೇಕು ಎಂದು ಜನರಿಗೆ ಮನವಿ ಮಾಡಿದರು.
ಮುಖಂಡರಾದ ಮಾಹಾದೇವಪ್ಪ ಸಾಲಿಮನಿ, ನಗರಸಭೆ ಸದಸ್ಯರಾದ ಸ್ಯಯದ್ ಕಾಲಿದ್ , ಶಿವುಕುಮಾರ ತಳವಾರ. ಸೇರಿದಂತೆ ಇತರರು ಮಾತನಾಡಿದರು.
ಈ ಸಭೆಯಲ್ಲಿ ನಗರಸಭೆ ಸದಸ್ಯರಾದ ಸತೀಶ ಪಂಚಬಾವಿ, ಸಿದ್ದು ಆರಬೊಳ ಸಾಹು, ಬಾಷಾ ಪಟೆಲ್, ಲಾಲನಸಾಬ್ ಕುರೇಶಿ, ಯುವ ಮುಖಂಡರಾದ ತಲತ ಚಾಂದ್, ಬಸವರಾಜ ತಳವಾರ, ಶಾಂತಪ್ಪ ಸಾಲಿಮನಿ, ರಾಘವೆಂದ್ರ ಯಕ್ಷಂತಿ ಸೇರಿದಂತೆ ನಗರದ ಅನೆಕ ಗಣ್ಯರು ಹಿರಿಯರು ದೇವಸ್ಥಾನದ ಭಕ್ತರು ಆಗಮಿಸಿದ್ದರು.