ಶಾಂತಿ ಸುವ್ಯವಸ್ಥೆಯಿಂದ ಚುನಾವಣೆ ನಡೆಸಲು ಪೊಲೀಸ್ ಭದ್ರತೆ

 ಹರಿಹರ. ಡಿ.26;  ಕಾನೂನು ಸುವ್ಯವಸ್ಥೆ ಕದಡದಂತೆ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಪೋಲಿಸ್ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಶಿವಪ್ರಸಾದ್ ಎಂ ಹೇಳಿದರು 
ಹರಿಹರ ತಾಲ್ಲೂಕಿನಲ್ಲಿ 23 ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಾಳೆ ಬೆಳಿಗ್ಗೆ ಏಳರಿಂದ ಸಂಜೆ 5ಗಂಟೆಯವರೆಗೂ ನಡೆಯಲಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಪೊಲೀಸ್ ಇಲಾಖೆಯಿಂದ ಭದ್ರತೆಯನ್ನು ಒದಗಿಸಲಾಗಿದೆ ಡಿವೈ ಎಸ್ ಪಿ .1ವೃತ್ತ ನಿರೀಕ್ಷಕರು .3 ಪಿಎಸ್ಸೈಗಳು 8 ಎ ಎಸ್ ಐ 23 ಹೆಡ್ ಕಾನ್ ಸ್ಟೇಬಲ್ 54 ಎ ಪಿ ಸಿ 16 ಪೋಲಿಸ್ ಪೇದೆಗಳು 111 ಗೃಹ ರಕ್ಷಕ ದಳದವರು 9 ಡಿಆರ್ 2 ಮತ್ತು ಕೆಎಸ್ಆರ್ ಪಿ ತುಕುಡಿಗಳು 1ಸೇರಿದಂತೆ ತಾಲ್ಲೂಕಿನಲ್ಲಿ 151 ಮತ ಗಟ್ಟೆಗಳಿಗೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.ಚುನಾವಣಾ ಆಯೋಗದ ಆದೇಶದಂತೆ ಚುನಾವಣಾ ನೀತಿ ಸಂಹಿತಿ ಉಲ್ಲಂಘನೆ ಆಗದಂತೆ ಗ್ರಾಮ ಪಂಚಾಯಿತಿಯ ಅಭ್ಯರ್ಥಿಗಳು ಊರಿನ ಮುಖಂಡರು, ಯುವಕರು ಕಾನೂನು ಸುವ್ಯವಸ್ಥೆ ಕದಡದಂತೆ ಪ್ರತಿಯೊಬ್ಬರು ಶಾಂತಿಯುತ ಚುನಾವಣೆಗೆ ಸಹಕರಿಸಬೇಕು ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡದೆ ಶಾಂತಿ ಸೌಹಾರ್ದತೆ ಸಾಮರಸ್ಯ ದಿಂದ ಈ ಚುನಾವಣೆ ನಡೆಯುವುದಕ್ಕೆ ತಾಲೂಕಾಡಳಿತ ಪೊಲೀಸ್ ಇಲಾಖೆ ಮತಗಟ್ಟೆ ಅಧಿಕಾರಿಗಳಿಗೆ ಮತ್ತು ಇತರ ಚುನಾವಣಾ ಸಿಬ್ಬಂದಿ ವರ್ಗ ದವರೊಂದಿಗೆ ಪ್ರೀತಿ ವಿಶ್ವಾಸದಿಂದ ಸಹಕರಿಸಿ ಚುನಾವಣೆಯನ್ನು  ಯಶಸ್ವಿಯಾಗಿ ಮಾಡೋಣ ಎಂದು ಹೇಳಿದರು ಈ ಸಂದರ್ಭದಲ್ಲಿ ನಗರ ಠಾಣೆಯ ಪಿಎಸ್ ಐ ಸುನಿಲ್ ಬಸವರಾಜ್, ಪೋಲಿಸ್ ಪೇದೆ ಕೃಷ್ಣ, ತಾಲೂಕು ಕಂದಾಯ ಇಲಾಖೆ ಅಧಿಕಾರಿಗಳು ಇತರರು ಇದ್ದರು