ಶಾಂತಿ- ಸಹಬಾಳ್ವೆ ಪ್ರತೀಕ ಇಫ್ತಾರ್

ಕಲಬುರಗಿ:ಎ.18: ಕಲಬುರಗಿಯ ಪ್ರತಿಷ್ಠಿತ ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೆಶಕಡಾ. ಫಾರುಕ್‍ಅಹ್ಮದ ಮಣ್ಣೂರ ಆಯೋಜಿಸಿದ್ದ ರಂಜಾನ ಪ್ರಯುಕ್ತ ಇಫ್ತಾರ್‍ಕೂಟ ಜರುಗಿತ್ತು.

ಹಿಂದೂ ಮುಸ್ಲಿಂ ಎನ್ನದೆ ಎಲ್ಲಾಜಾತಿ ಜನಾಂಗದ ಪ್ರಮುಖರನ್ನು ಒಂದೇಡೆ ಸೇರಿಸಿ ಕೋಮು ಸೌಹರ್ದತೆ ಪ್ರತೀಕವಾಗಿ ಇಫ್ತಾರ್‍ಕೂಟ ಏರ್ಪಡಿಸಲಾಗಿತ್ತು. ಶಾಂತಿ ಸಹಬಾಳ್ವೆ ಸಾಮರಸ್ಯ ಸಂದೇಶ ಸಾರಲಾಯಿತ್ತು.

ಸೈಯದಆಕಿಬಲ್ ಹುಸೇನಿ ಸಾಹೇಬ್ ಮಾತನಾಡಿ ಮನ್ನೂರಆಸ್ಪತ್ರೆ ಕಳೆದ 2 ವರ್ಷಗಳಿಂದ ನಿರಂತರ ಸಮಾಜಿಕ ಕೇಲಸಮಾಡಿಕೊಂಡುಬರುತ್ತಿದ್ದು ಕಳೆದ ವರ್ಷ ಬೆಸಿಗೆ ಕಾಲದಲ್ಲಿ ಕಲಬುರಗಿಜಿಲ್ಲಾದ್ಯಂತ ಪ್ರತಿತಾಲೂಕಿನಲ್ಲಿ ಶುದ್ದಕುಡಿಯುವ ನೀರಿನ ವ್ಯವಸ್ಥೆ ಮಾಡಿಅರವಟಿಕೆ ಮೂಲಕ ಪೂರೈಸಿದ್ದರು, ಕಲಬರಗಿ, ಬೀದರ, ಯಾದಗೀರಿಜಿಲ್ಲಾದ್ಯಂತಉಚಿತಆರೋಗ್ಯತಪಾಸಣೆ ಆಯೋಜಿಸಿ ಉಚಿತ ಔಷದಿ ವಿತರಣೆ ಮಾಡಿದ್ದರು, ಕಲಬುರಗಿಜಿಲ್ಲೆಯ 500 ಕ್ಷಯ ರೋಗಿಗಳಿಗೆ ದತ್ತು ಪಡೆದು ರಾಜ್ಯದರಾಜ್ಯಪಾಲರಿಂದ ಪ್ರಶಸ್ತಿ ಪಡೆದಿದ್ದಾರೆ, ರಸ್ತೆ ಬದಿಯ ವ್ಯಾಪಾರಿಗಳಿಗೆ ಛತ್ರಿ ವಿತರಣೆ , ಟ್ಯಾಫಿಕ್ ಪೋಲಿಸರಿಗೆ ಹೆಲ್ಮೆಟ್ ವಿತರಣೆ ಸೇರಿದಂತೆ ಅನೇಕ ಜನಪರಸಮಾಜಿಕPಕಾರ್ಯಮಾಡಿಕೊಂಡು ಬರುತ್ತಿದ್ದು ಮಣ್ಣೂರ ಆಸ್ಪತ್ರೆಯಕಾರ್ಯ ಶಾಘ್ಲನಿಯವಾಗಿದೆಎಂದರು.

ಈ ಸಂದರ್ಭದಲ್ಲಿ ಶಾಸಕಿ ಖನಿಜ್ ಫಾತಿಮಾ, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೆಶಕಡಾ. ಫಾರುಕ್‍ಅಹ್ಮದ ಮಣ್ಣೂರ, ಬಾಬುಮಿಯ್ಯಾ ಮಣ್ಣೂರ, ಸಜ್ಜದಅಲಿ ಇನಾಂದಾರ, ಅಲಿಂ ಇನಾಂದಾರ, ರವಿ ದೇಗಾಂವ, ಸಚಿನ ಫರತಾಬಾದ, ಸತೀಶ ಚವ್ಹಾಣ, ಸೇರಿದಂತೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಪ್ರತಿವರ್ಷದಂತೆ ಈ ವರ್ಷವೂ ಹಿಂದೂ ಮುಸ್ಲಿಂ ಎನ್ನದೆಎಲ್ಲಾಜಾತಿಜನಾಂಗದ ಪ್ರಮುಖರನ್ನುಒಂದೇಡೆ ಸೇರಿಸಿ ಕೋಮು ಸೌಹರ್ದತೆ ಪ್ರತೀಕವಾಗಿಇಫ್ತಾರ್‍ಕೂಟ ಆಯೋಜಿಸಿದ್ದರು.

ಡಾ. ಫಾರುಕ್ ಮಣ್ಣೂರ

ನಿರ್ದೆಶಕರು ಮಣ್ಣೂರಆಸ್ಪತ್ರೆ ಕಲಬುರಗಿ