ಶಾಂತಿ ಸಭೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಆ.4:ಪಟ್ಟಣದ ಪೋಲೀಸ್ ಠಾಣೆಯಲ್ಲಿ ಇಂದು ಮೊರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಸಲಾಯಿತು.
ಸಿಪಿಐ ಎನ್. ಸತೀಶ್ ಮಾತನಾಡಿ, ಈ ತಿಂಗಳ 8,9,10 ರಂದು ಪಟ್ಟಣದಲ್ಲಿ ನಡೆಯುವ ಮೊರಂ ಹಬ್ಬದಲ್ಲಿ ಎರಡು ಕೋಮಿನ ಜನರು ಸಾಮರಸ್ಯದಿಂದ ಹಬ್ಬ ಆಚರಣೆ ಮಾಡಬೇಕು, ಯಾವುದೇ ಕಾರಣಕ್ಕೂ ಶಾಂತಿ ಸುವ್ಯವಸ್ಥೆ ಕದಡಬಾರದು ಎಂದು ತಿಳಿಸಿದರು.
ತಾಲೂಕಿನಲ್ಲಿ ಈ ತಿಂಗಳ 8,9,10, ನೇ ತಾರೀಖಿನಂದು ತಾಲ್ಲೂಕಿನಲ್ಲಿ ಪಟ್ಟಣ ಸೇರಿ ಹನ್ನೊಂದು ಗ್ರಾಮಗಳಲ್ಲಿ ಮೊರಂ ಹಬ್ಬ ವನ್ನು ಆಚರಿಸಲಾಗುವುದು ಎಲ್ಲಾ ಕಡೆ ಶಾಂತಿ ಸಭೆಯನ್ನು ಮಾಡಲಾಗಿದೆ ಎಲ್ಲಾರು ಹಬ್ಬ ವನ್ನು ಸಂತೋಷದಿಂದ ಆಚರಿಸಿ ಶಾಂತಿ ಕದಡುವವರ ಬಗ್ಗೆ ನಿಗ ವಹಿಸಿ ಅಂತಹುದೇನಾಂದರು ಕಂಡು ಬಂದಲ್ಲಿ 112 ನಮ್ಮ ಸಹಾಯವಾಣಿ ಗೆ ಕರೆ ಮಾಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ, ಪಿ ಎಸ್ ಐ ಪಾಂಡುರಂಗ ಯಾವುದೇ ಕಾರಣಕ್ಕೂ ಹಬ್ಬದಲ್ಲಿ ಹಸಿ ಮರಗಳನ್ನು ಕಡಿಯುವಂತಿಲ್ಲಾ, ಒಣ ಮರಗಳನ್ನು ಉಪಯೋಗಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರೊಂದಿಗೆ ಹಿಂದೂ ಮುಖಂಡರು ಉಪಸ್ಥಿತರಿದ್ದರು.

Attachments area