
ಚಿಂಚೋಳಿ,ಮಾ.28- ಇಲ್ಲಿನ ಪೆÇಲೀಸ್ ಠಾಣೆಯಲ್ಲಿ ಶಾಂತಿ ಸಭೆಯಲ್ಲಿ ಹೋಳಿ ಹುಣ್ಣಿಮೆ ಮತ್ತು ಶಬ್ ಏ ಬರಾತ್ ಹಾಗೂ ಗುಡ್ ಫ್ರೈಡೆ ಹಬ್ಬಗಳನ್ನು ಕೋವಿಡ್-19 ಸೋಂಕಿನ ಹಿನ್ನಲೆಯಲ್ಲಿ ಗುಂಪಾಗಿ ಹಾಗೂ ಸಮೊಹಿಕವಾಗಿ ಆಚರಿಸದೇ ತಮ್ಮ ತಮ್ಮ ಮನೆಗಳಲ್ಲಿ ಶಾಂತಿಯುತವಾಗಿ ಆಚರಿಸುವಂತೆ ಸಿಪಿಐ ಮಾಂತೇಶ ಪಾಟೀಲ ಅವರು ಕರೆ ನೀಡಿದರು.
ಮಹಾಮಾರಿ ಕೋವಿಡ-19 ಕೊರೊನಾ ಸೋಂಕು ಪುನಃ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದನ್ನು ತಡೆಯಲು ಸರ್ಕಾರ ಹೊರಡಿಸಿರುವ ಆದೇಶ ಮತ್ತು ಮಾರ್ಗಸೂಚಿಯಂತೆ ಎಲ್ಲ ಹಬ್ಬಹರಿದಿನಗಳನ್ನು ಸಾಮೊಹಿಕವಾಗಿ ಆಚರಿಸಲು ನಿಷೆಧ ಹೆರಲಾಗಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು ಹಾಗೂ ತಮ್ಮ ಮನೆಗಳಲ್ಲಿಯೇ ಹಬ್ಬಗಳನ್ನು ಆಚರಿಸಬೇಕು ಎಂದರು.
ಈ ಸಂದರ್ಭದಲ್ಲಿ. ಕುಚಾಂವರಂ ಪಿಎಸ್ಐ ಉಪೇಂದ್ರಕುಮಾರ. ಚಿಂಚೋಳಿಯ ಮುಖಂಡರಾದ ಸಂತೋಷ್ ಗಡಂತಿ. ಗೌತಮ್ ಬೊಮ್ಮನಹಳ್ಳಿ. ಕೆ.ಎಂ. ಬಾರಿ. ಅಬ್ದುಲ್ ಬಾಸಿದ. ಜಗನಾಥ ಗುತ್ತೇದಾರ. ಶಿವಕುಮಾರ ಕೊಳ್ಳೂರು. ಮತಿನ ಸೌದಾಗರ್. ಹನುಮಂತ ಗಾರಂಪಳ್ಳಿ. ಮತ್ತು ಅನೇಕ ವಿವಿಧ ಪಕ್ಷದ ಮುಖಂಡರು ಹಾಗೂ ಹಿಂದೂ ಮುಸ್ಲಿಂ ಸಮಾಜದ ಮುಖಂಡರು ಮತ್ತು ಪೆÇಲೀಸ್ ಸಿಬ್ಬಂದಿಗಳು ಇದ್ದರು.