ಶಾಂತಿ ಮತ್ತು ತ್ಯಾಗದ ಪ್ರತಿರೂಪ ವೈಶ್ಯ ಸಮಾಜ : ಗುಜ್ಜಾ

ಸೈದಾಪುರ:ಮೇ.19:ವೈಶ್ಯ ಸಮಾಜವು ಅಹಿಂಸೆ, ತ್ಯಾಗವನ್ನು ನಂಬಿದ ಜನಾಂಗವಾಗಿದೆ, ಈ ಸಮಾಜದಲ್ಲಿ ಜನಿಸಿದ ನಾವುಗಳು ಧನ್ಯರು . ಪ್ರತಿಯೊಂದು ಜೀವಿಗಳಿಗೆ ಸುಖ, ಶಾಂತಿ, ಸಮೃದ್ಧಿ ದಯಪಾಲಿಸಲೆಂದು ನಾವುಗಳು ಭಕ್ತಿಪೂರ್ವಕವಾಗಿ ಪ್ರಾರ್ಥಿಸೋಣ ಎಂದು ಆರ್ಯ ವೈಶ್ಯ ಸೇವಾ ಸಂಘದ ಕೋಶಾಧ್ಯಕ್ಷ ಸೀತಾರಾಮಯ್ಯ ಗುಜ್ಜಾ ಅಭಿಪ್ರಾಯಪಟ್ಟರು.
ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ಆರ್ಯ ವೈಶ್ಯ ಸೇವಾ ಸಂಘದಿಂದ ಕನ್ನಿಕಾ ಪರಮೇಶ್ವರಿ ವಾಸವಿ ಜಯಂತಿ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗೌರವಕ್ಕಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಆದಿಶಕ್ತಿ ವಾಸವಿ ಕನ್ನಿಕಾ ಪರಮೆಶ್ವರಿ ದೇವಿ ಮನುಕುಲಕ್ಕೆ ಶಾಂತಿ ಮತ್ತು ತ್ಯಾಗದ ಪ್ರತಿರೂಪವಾಗಿದ್ದಾಳೆ. ಲೌಕಿಕ ಜೀವನವನ್ನು ತ್ಯಾಗ ಮಾಡಿ ದೇವತಾ ಸ್ಥಾನಮಾನ ಪಡೆದ ಅವತಾರಿಣಿಯಾಗಿದ್ದೂ, ಅವರ ಪುಣ್ಯ ಕಾರ್ಯಗಳನ್ನು ನಾವುಗಳು ಪಾಲಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುಂಚೆ ಪಟ್ಟಣದಲ್ಲಿ ಬೆಳಗ್ಗೆ 8 ಗಂಟೆಗೆ ಗ್ರಾಮದ ವಿಶ್ವನಾಥ ಮಂದಿರದಿಂದ ಸುಮಂಗಲೆಯರ ಕುಂಭ ಕಳಸದೊಂದಿಗೆ ಮತ್ತು ಗೋವಿಂದ ನಾಮಾವಳಿಯೊಂದಿಗೆ ಮುಖ್ಯ ರಸ್ತೆಯ ಮೂಲಕ ವಾಸವಿ ವಿದ್ಯಾ ಸಂಸ್ಥೆಯವರೆಗೆ ಕನ್ನಿಕಾ ಪರಮೇಶ್ವರಿಯ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಸಮಾಜ ಭಾಂದವರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ, ಬಿಳಿ ಸಮವಸ್ತ್ರದೊಂದಿಗೆ ಭಕ್ತಯಿಂದ ಭಾಗಿವಹಿಸಿರುವುದು ವಿಶೇಷವಾಗಿತ್ತು.

ಆರ್ಯ ವೈಶ್ಯ ಸೇವಾ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣಪ್ಪ ಪಾಲದಿ, ಸಹ ಕಾರ್ಯದರ್ಶಿ ಸುರೇಶ ಪುರಿ, ಕೋಶಾಧ್ಯಕ್ಷ ಸೀತರಾಮಯ್ಯ ಗುಜ್ಜ, ಈಶ್ವರಯ್ಯ ಬಾದಾಮಿ, ಕೆ.ಬಿ.ಬನ್ನಯ್ಯ, ಪಾಂಡುರಂಗಯ್ಯ ಗುಮಡಾಲ, ಕೆ.ಬಿ.ನಾಗರಾಜ, ನರಸಿಂಹಲು ಕಲಕೊಂಡ, ಕೆಪಿ ಲಕ್ಷ್ಮೀನಾರಾಯಣಯ್ಯ, ಕೆಪಿ ವಿರೇಶ, ನಾಗಯ್ಯ ಮಿರಿಯಾಲ್, ಎಸ್.ಆರ್ ರಾಘವೇಂದ್ರ, ಸತ್ಯನಾರಾಯಣ ಪತ್ತಿ, ದತ್ತಾತ್ರಯ್ಯ ಸಂಗೋಳಿಗಿ, ಎನ್.ಮನೋಹರ, ಡಾ ನಾಗೇಶ, ಮಹಿಳಾ ಸಂಘದ ಅಧ್ಯಕ್ಷೆ ವಸಂತಮ್ಮ ಮಿರಿಯಾಲ, ಕಾರ್ಯದರ್ಶಿ ಕೆ.ಪಿ ಸವಿತಾ ವಸಂತಕುಮಾರ ಸೇರಿದಂತೆ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.