ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ


ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನವನ್ನು ಯುನೆಸ್ಕೋ 2001 ರಲ್ಲಿ ಘೋಷಿಸಿತು ಮತ್ತು ಶಾಂತಿಯುತ ಮತ್ತು ಸುಸ್ಥಿರ ಸಮಾಜಗಳಿಗೆ ವಿಜ್ಞಾನದ ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಉದಯೋನ್ಮುಖ ಚರ್ಚೆಗಳಲ್ಲಿ ವ್ಯಾಪಕ ಸಾರ್ವಜನಿಕರನ್ನು ತೊಡಗಿಸಿಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸಲು ಪ್ರತಿ ವರ್ಷ ನವೆಂಬರ್ 10 ರಂದು ಆಚರಿಸಲಾಗುತ್ತದೆ.

ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನವನ್ನು ಆರಂಭದಲ್ಲಿ 1999 ರಲ್ಲಿ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಸ್ತಾಪಿಸಲಾಯಿತು. 2001 ರಲ್ಲಿ, ಯುನೆಸ್ಕೊ ಅಧಿಕೃತ ಘೋಷಣೆಯನ್ನು ಮಾಡಿತು. ಮೊದಲ ಬಾರಿಗೆ ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನವನ್ನು ನವೆಂಬರ್ 10, 2002 ರಂದು ನಡೆಸಲಾಯಿತು. ಅಂದಿನಿಂದ, ಈ ದಿನವು ಪ್ರಪಂಚದಾದ್ಯಂತ ವಿಜ್ಞಾನಕ್ಕಾಗಿ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಹಣವನ್ನು ಉತ್ಪಾದಿಸಲು ಸಹಾಯ ಮಾಡಿದೆ.

ಈ ದಿನಾಚರಣೆಯ ಉದ್ದೇಶ ಏನೆಂದರೆ ಶಾಂತಿಯುತ ಮತ್ತು ಸುಸ್ಥಿರ ಸಮಾಜಕ್ಕಾಗಿ ವಿಜ್ಞಾನದ ಪಾತ್ರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು;
ದೇಶ ದೇಶಗಳ ನಡುವೆ ವಿಜ್ಞಾನದ ಬೆಳವಣಿಗೆಗಳ ಪರಸ್ಪರ ಹಂಚಿಕೆಗಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಐಕ್ಯತೆಯನ್ನು ಉತ್ತೇಜಿಸುವುದು;
ಸಮಾಜದ ಒಳಿತಿಗಾಗಿ ವಿಜ್ಞಾನವನ್ನು ಬಳಸುವತ್ತ ಅಳವಡಿಸಿಕೊಂಡಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬದ್ಧತೆಗಳನ್ನು ಮನನ ಮಾಡಿಕೊಳ್ಳುವುದು;
ವೈಜ್ಞಾನಿಕ ಪ್ರಯತ್ನಗಳು/ಮುನ್ನಡೆಗಳಿಗೆ ಬೆಂಬಲಿಸುವ ನಿಟ್ಟಿನಲ್ಲಿ ವಿಜ್ಞಾನವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಗಮನ ಸೆಳೆಯುವುದು
ಕಳೆದ ವರ್ಷ ಜಗತ್ತು COVID-19 ಸಾಂಕ್ರಾಮಿಕ ಪಿಡುಗಿನಿಂದ ತೊಳಲಾಡುತ್ತಿರುವ ಈ ತುರ್ತು ಪರಿಸ್ಥಿತಿಯಲ್ಲಿ ಸಮಯೋಚಿವಾಗಿ ಈ ವರ್ಷ, ವಿಶ್ವ ವಿಜ್ಞಾನ ದಿನಾಚರಣೆಯು “ಜಾಗತಿಕ ಸಾಂಕ್ರಾಮಿಕ ಪಿಡುಗನ್ನು ಎದುರಿಸಲು ಸಮಾಜಕ್ಕಾಗಿ ಮತ್ತು ಸಮಾಜದೊಂದಿಗೆ ವಿಜ್ಞಾನ” ಎಂಬ ಧ್ಯೇಯದೊಂದಿಗೆ ಆಚರಿಸಲಾಗಿದೆ.

ಶಾಂತಿಯು ಹಿಂಸೆ, ಸಂಘರ್ಷದ ವರ್ತನೆಗಳ ಕೊರತೆ ಮತ್ತು ಹಿಂಸೆಯ ಭಯದಿಂದ ಸ್ವಾತಂತ್ರ್ಯದ ಲಕ್ಷಣಗಳಿರುವ ಸಾಮರಸ್ಯದ ಒಂದು ಸ್ಥಿತಿ. ಸಾಮಾನ್ಯವಾಗಿ ಹಗೆತನದ ಅನುಪಸ್ಥಿತಿಯೆಂದು ತಿಳಿಯಲಾದ ಶಾಂತಿಯು ಆರೋಗ್ಯಕರ ಅಥವಾ ಹೊಸದಾಗಿ ಗುಣವಾದ ಅಂತರ್ವ್ಯಕ್ತೀಯ ಅಥವಾ ಅಂತರರಾಷ್ಟ್ರೀಯ ಸಂಬಂಧಗಳು, ಸಾಮಾಜಿಕ ಅಥವಾ ಆರ್ಥಿಕ ಕಲ್ಯಾಣದ ವಿಷಯಗಳಲ್ಲಿ ಸಮೃದ್ಧಿ, ಸಮಾನತೆಯ ಸ್ಥಾಪನೆ, ಮತ್ತು ಎಲ್ಲರ ವಾಸ್ತವ ಹಿತಾಸಕ್ತಿಗಳಿಗೆ ಸೇವೆ ಒದಗಿಸುವ ಕಾರ್ಯರೂಪದಲ್ಲಿರುವ ರಾಜಕೀಯ ವ್ಯವಸ್ಥೆಯ ಅಸ್ತಿತ್ವವನ್ನು ಕೂಡ ಸೂಚಿಸುತ್ತದೆ.ವಿಶ್ವಸಂಸ್ಥೆಯ ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನಾಚರಣೆಯನ್ನು ವಾರ್ಷಿಕವಾಗಿ ನವೆಂಬರ್ 10 ರಂದು ಆಚರಿಸಲಾಗುತ್ತದೆ. ಸಮಾಜದಲ್ಲಿ ವಿಜ್ಞಾನದ ಪಾತ್ರ ಮತ್ತು ಉದಯೋನ್ಮುಖ ವೈಜ್ಞಾನಿಕ ವಿಷಯಗಳ ಕುರಿತು ಸಾರ್ವಜನಿಕರನ್ನು ತೊಡಗಿಸಿಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸುತ್ತದೆ.

2021 ರ ಥೀಮ್: “ಹವಾಮಾನ-ಸಿದ್ಧ ಸಮುದಾಯಗಳನ್ನು ನಿರ್ಮಿಸುವುದು”. 2020 ರ ಥೀಮ್: “COVID-19 ವ್ಯವಹರಿಸುವಾಗ ಸಮಾಜಕ್ಕಾಗಿ ಮತ್ತು ಸಮಾಜದೊಂದಿಗೆ ವಿಜ್ಞಾನ”. 2019 ರ ಥೀಮ್: “ಓಪನ್ ಸೈನ್ಸ್, ಯಾರನ್ನೂ ಹಿಂದೆ ಬಿಡಬೇಡಿ” 2018 ರ ಥೀಮ್: “ವಿಜ್ಞಾನ, ಮಾನವ ಹಕ್ಕು”.2017 ರ ಥೀಮ್: “ಜಾಗತಿಕ ತಿಳುವಳಿಕೆಗಾಗಿ ವಿಜ್ಞಾನ”. 2016 ರ ಥೀಮ್: “ವಿಜ್ಞಾನ ಕೇಂದ್ರಗಳು ಮತ್ತು ವಿಜ್ಞಾನ ವಸ್ತುಸಂಗ್ರಹಾಲಯಗಳನ್ನು ಆಚರಿಸುವುದು ಆಗಿತ್ತು.